masthmagaa.com:

ವಿಧಾನಸಭೆ ಕಲಾಪದ ವೇಳೆ ಇವತ್ತು ಆಡಳಿತ ಪಕ್ಷದ ಇಬ್ಬರು ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರೇಣುಕಾಚಾರ್ಯ ಪರಸ್ಪರ ಮಾತಿನ ಯುದ್ಧ ನಡೆಸಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕೊಡ್ತಾರಾ ಇಲ್ವಾ ಅನ್ನೋದನ್ನ ಸಿಎಂ ಹೇಳಬೇಕು. ಮೀಸಲಾತಿ ಬಗ್ಗೆ ಇವತ್ತು ಉತ್ತರ ಕೊಡ್ತೀನಿ ಅಂತ ಸಿಎಂ ನಿನ್ನೆ ಹೇಳಿದ್ದರು. ಆದ್ರೆ ಉತ್ತರ ಕೊಡಬೇಕಾದ ಅವರೇ ಕಲಾಪಕ್ಕೆ ಬಂದಿಲ್ಲ. ಸಿಎಂ ಯಡಿಯೂರಪ್ಪ ನಾಪತ್ತೆಯಾಗಿದ್ದಾರೆ. ನಮ್ಮ ಸಮುದಾಯದ ಬಗ್ಗೆ ವಿಪಕ್ಷದವರಿಗೆ ಇರುವ ಪ್ರೀತಿ ಮುಖ್ಯಮಂತ್ರಿಗಳಿಗೆ ಇಲ್ಲ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ರು.

ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಿಡಿಮಿಡಿಗೊಂಡ ಶಾಸಕ ರೇಣುಕಾಚಾರ್ಯ, ಮುಖ್ಯಮಂತ್ರಿಗಳಿಗೆ ಎಲ್ಲಾ ಸಮುದಾಯದ ಬಗ್ಗೆ ಪ್ರೀತಿ, ಗೌರವ ಇದೆ. ಸಿಎಂ ನಾಪತ್ತೆಯಾಗಿದ್ದಾರೆ ಅಂತ ನೀವು ಹೇಳೋದು ಸರಿಯಲ್ಲ ಅಂತ ಹೇಳಿದ್ರು. ಆಗ ಯತ್ನಾಳ್ ಮಾತನಾಡಿ, ಮತ್ತೇನು.. ನೀವ್ ಹೇಳಿದ್ದೆಲ್ಲಾ ಕೇಳ್ತಾ ಇರಬೇಕಾ ಅಂತ ಸಿಟ್ಟಾದ್ರು. ಈ ವೇಳೆ ಸ್ಪೀಕರ್ ಮಧ್ಯಪ್ರವೇಶಿಸಿ ಯತ್ನಾಳ್ ಮತ್ತು ರೇಣುಕಾಚಾರ್ಯ ನಡುವಿನ ಮಾತಿನ ಯುದ್ಧಕ್ಕೆ ಬ್ರೇಕ್ ಹಾಕಿದ್ರು.

-masthmagaa.com

Contact Us for Advertisement

Leave a Reply