ಚೀನಾಗೆ ವಾರ್ನಿಂಗ್‌ ಕೊಟ್ಟ ಸೇನಾ ಮುಖ್ಯಸ್ಥ! ಹೇಳಿದ್ದೇನು?

masthmagaa.com:

ತಂಟೆಕೋರ ಚೀನಾಗೆ ಈ ಬಾರಿ ಭಾರತದ ಸೇನಾ ಮುಖ್ಯಸ್ಥರೇ ಎಚ್ಚರಿಕೆ ಕೊಟ್ಟಿದ್ದಾರೆ. ಭಾರತದಲ್ಲಿ ನಡೆದ 13ನೇ ಇಂಡೋ-ಪೆಸಿಫಿಕ್‌ ಸೇನಾ ಮುಖ್ಯಸ್ಥರ ಸಮಾವೇಶದಲ್ಲಿ ಭಾರತದ ಆರ್ಮಿ ಚೀಫ್ ಮನೋಜ್‌ ಪಾಂಡೆ ಮಾತನಾಡಿದ್ರು. ಇಂಡೋ-ಪೆಸಿಫಿಕ್‌ನ ಶಾಂತಿಗಾಗಿ ಹಲವು ದೇಶಗಳು ಪ್ರಯತ್ನಿಸುತ್ತಿದ್ದರೂ ಕೆಲವು ರಾಷ್ಟ್ರಗಳು ಮಾತ್ರ ಈ ಭಾಗದಲ್ಲಿ ಸ್ಪರ್ಧೆ ಮಾಡ್ತಿರೋದನ್ನ ನಾವು ನೋಡುತ್ತಿದ್ದೇವೆ. ಕೆಲವು ದೇಶಗಳು ಲೀಸ್‌ ಹೆಸರಲ್ಲಿ ಭೂ ಭಾಗಗಳನ್ನ ಸ್ವಾಧೀನಪಡಿಸಿಕೊಳ್ಳುತ್ತಿವೆ. ಮತ್ತು ಮಿಲಿಟರಿ ನೆಲೆಗಳನ್ನ ಸ್ಥಾಪಿಸಲು ಕೃತಕ ದ್ವೀಪಗಳನ್ನ ವಿಸ್ತರಿಸುತ್ತಿವೆ. ಇದು ಭದ್ರತಾ ಕಳವಳಕ್ಕೆ ಕಾರಣವಾಗಿದೆ ಅಂತ ಜನರಲ್ ಪಾಂಡೆ ಚೀನಾ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ. ‌ಇದೇ ವೇಳೆ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ, ಹಾಗೂ ವಿವಾದಗಳನ್ನು ಶಾಂತಿಯುತ ಮಾರ್ಗದಲ್ಲಿ ಬಗೆಹರಿಸಿಕೊಳ್ಳಬೇಕು. ಸೇನೆ ಬಳಕೆಗೆ ಹಚ್ಚಿನ ಒತ್ತು ನೀಡಬಾರದು. ಇಂಡೋ ಪೆಸಿಫಿಕ್‌ ಭಾಗದ ಶಾಂತಿಯಲ್ಲಿ ಇದು ಭಾರತದ ನಿಲುವು ಅಂತ ಸೇನಾ ಮುಖ್ಯಸ್ಥರು ಹೇಳಿದ್ದಾರೆ. ಇನ್ನು ಇದೇ ಸಭೆಯಲ್ಲಿ ಅಮೆರಿಕ ಸೇನಾ ಮುಖ್ಯಸ್ಥ ಜನರಲ್‌ ರಾಂಡಿ ಜಾರ್ಜ್‌ ಕೂಡ ಭಾಗವಹಿಸಿದ್ರು. ಇಂಡೋ- ಪೆಸಿಫಿಕ್‌ನ ಸ್ಥಿರತೆಗಾಗಿ ಅಮೆರಿಕ ಮತ್ತು ಭಾರತೀಯ ಸೇನೆಗಳ ನಡುವಿನ ಪಾಲುದಾರಿಕೆ ಅಗತ್ಯ. ನಾವು ಈ ಭಾಗದಲ್ಲಿ ಪ್ರಸ್ತುತ ಚಾಲೆಂಜಿಂಗ್‌ ಸಿಚುಯೇಶನ್‌ನ್ನ ಫೇಸ್‌ ಮಾಡ್ತಿದಿವಿ. ಆದ್ರೆ ಇದು ಹೊಸದೇನು ಅಲ್ಲ. ನಾವು ಈ ಹಿಂದೆ ಎಲ್ಲಾ ಸವಾಲುಗಳನ್ನ ಜಯಿಸಿದ್ದೇವೆ ಮತ್ತು ಭವಿಷ್ಯದಲ್ಲೂ ನಾವು ಅವುಗಳನ್ನ ಒಟ್ಟಾಗಿ ಜಯಿಸುತ್ತೇವೆ. ನಮ್ಮ ಸೇನೆಗಳ ನಡುವಿನ ಸಂಬಂಧ ಸ್ಟ್ರಾಂಗ್‌ ಆಗಿದ್ದು, ಬಲವಾಗಿ ಬೆಳೆಯುತ್ತಿದೆ ಅಂತ ಅಮೆರಿಕ ಸೇನಾ ಮುಖ್ಯಸ್ಥರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply