ಇರಾನ್‌ ಸುಪ್ರೀಂ ನಾಯಕನ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌ ಬ್ಯಾನ್‌!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಇರಾನ್‌ ಸುಪ್ರೀಂ ಲೀಡರ್‌ ಅಯತುಲ್ಲಾಹ್‌ ಅಲಿ ಖಮೇನಿಯ ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಮ್‌ ಅಕೌಂಟ್‌ಗಳನ್ನ ಮೆಟಾ ಕಂಪನಿ ಬ್ಯಾನ್‌ ಮಾಡಿದೆ. ಖಮೇನಿ ಮೆಟಾ ʻಕಂಟೆಂಟ್‌ ಪಾಲಿಸಿʼಯನ್ನ ಉಲ್ಲಂಘನೆ ಮಾಡಿದ್ದಾರೆ ಅಂತ ಮೆಟಾ ಕಂಪನಿಯ ವಕ್ತಾರ ಹೇಳಿದ್ದಾರೆ. ಖಮೇನಿ ಅವ್ರು ತಮ್ಮ ಫೇಸ್‌ಬುಕ್‌ ಹಾಗೂ ಇನ್ಸ್ಟಾಗ್ರಾಮ್‌ ಅಕೌಂಟ್ಸ್‌ ಮೂಲಕ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ರು. ಜನರ ದಾರಿ ತಪ್ಪಿಸ್ತಿದ್ರು ಹೀಗಾಗಿ ನಾವು ನಿರ್ಬಂಧ ಹೇರಿದ್ದೇವೆ ಅಂತ ಮೆಟಾ ತಿಳಿಸಿದೆ. ಖಮೇನಿ ಜೊತೆಗೆ 200 ಫೇಸ್‌ಬುಕ್‌ ಮತ್ತು 125 ಇನ್ಸ್ಟಾಗ್ರಾಮ್‌ ಅಕೌಂಟ್‌ಗಳು, 9 ಗ್ರೂಪ್‌ಗಳು ಮತ್ತು 29 ಪೇಜ್‌ಗಳನ್ನ ಕೂಡ ರಿಮೂವ್‌ ಮಾಡಲಾಗಿದೆ. ಈಗ ಬ್ಯಾನ್‌ ಆಗಿರೋವೆಲ್ಲಾ ಇರಾನ್‌ಗೆ ಸೇರಿದ್ದು ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply