ಇಮ್ರಾನ್‌ ಖಾನ್‌ ಪ್ರಧಾನಿಯಾಗ್ತಾರೆ: PTI ಸೀನಿಯರ್‌ ಲೀಡರ್‌

masthmagaa.com:

“ಇಮ್ರಾನ್‌ ಖಾನ್‌ ವಾಪಸ್‌ ಬರ್ತಾರೆ. ಬಂದು ಪ್ರಧಾನಿ ಹುದ್ದೆ ಅಲಂಕರಿಸ್ತಾರೆ‌” ಅಂತ PTI ಸೀನಿಯರ್ ಲೀಡರ್‌ ಫೈಸಲ್‌ ಜಾವೆದ್‌, ಹೇಳಿದ್ದಾರೆ. ಆದ್ರೆ 10 ವರ್ಷಗಳವರೆಗೆ ಯಾವುದೇ ಸಾಂವಿಧಾನಿಕ ಹುದ್ದೆ ಅಲಂಕರಿಸೋದ್ರಿಂದ ಬ್ಯಾನ್‌ ಆಗಿರೋ ಇಮ್ರಾನ್‌ ಖಾನ್‌, ಅದೇಗೆ ಪ್ರಧಾನಿಯಾಗ್ತಾರೋ ಗೊತ್ತಿಲ್ಲ. ಇತ್ತೀಚೆಗಷ್ಟೇ ಪಾಕ್‌ ಚುನಾವಣಾ ಅಧಿಕಾರಿಯೊಬ್ರು ಮತಗಳನ್ನ ದುರ್ಬಳಕೆ ಮಾಡ್ಕೊಂಡಿರೋದನ್ನ ಪಬ್ಲಿಕ್‌ ಆಗಿ ಹೇಳ್ಕೊಂಡಿದ್ರು. ಅದಾದ ನಂತರ ಪಾಕ್‌ ಚುನಾವಣೆ ಬಗ್ಗೆ ತನಿಖೆಯಾಗ್ಬೇಕು ಅನ್ನೋ ಕೂಗು ಕೇಳಿ ಬರ್ತಿದೆ. ಇದರ ನಡುವೆ ಸೇನೆ ಶೆಹಬಾಜ್‌ ಷರೀಫ್‌ಗೆ ಪಟ್ಟ ಕಟ್ಟೋಕೆ ತಯಾರಿ ಮಾಡ್ತಿದೆ. ಈಗ ನಮ್ಮ ನಾಯಕ ಪಿಎಂ ಆಗ್ತಾರೆ ಅಂತ ಇಮ್ರಾನ್ ಬೆಂಬಲಿಗ ಹೇಳಿಕೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply