GPS ಸಿಗ್ನಲ್‌ ತಪ್ಪಿನಿಂದ ಇರಾನ್‌ ಪ್ರವೇಶಿಸಿದ 20 ವಿಮಾನಗಳು!

masthmagaa.com:

ಮನುಷ್ಯರು GPS ಆಧಾರಿತ ಗೂಗಲ್‌ ಮ್ಯಾಪ್‌ ನೋಡ್ಕೊಂಡು ದಾರಿ ತಪ್ಪಿ ಇನ್ನೆಲ್ಲಿಗೋ ಹೋಗೋ ಘಟನೆಗಳು ಸಾಮಾನ್ಯ. ಆದ್ರೆ ಫೇಕ್‌ ಜಿಪಿಎಸ್‌ ಸಿಗ್ನಲ್‌ನಿಂದ ವಿಮಾನಗಳೇ ದಾರಿ ತಪ್ಪಿರುವ ಘಟನೆಗಳು ಈಗ ವರದಿಯಾಗಿವೆ. ಕಳೆದ 15 ದಿನಗಳಲ್ಲಿ ಕನಿಷ್ಠ 20 ವಿಮಾನಗಳು ಫೇಕ್‌ ಜಿಪಿಎಸ್‌ ಸಿಗ್ನಲ್‌ನ ಕಾರಣದಿಂದಾಗಿ ಇರಾನ್‌ನ ವಾಯುಪ್ರದೇಶದಲ್ಲಿ ಹಾರಾಟ ನಡೆಸಿವೆ ಅಂತ ವರದಿಯಾಗಿದೆ. ಈ ರೀತಿ ದಾರಿ ತಪ್ಪಿದ ವಿಮಾನಗಳಲ್ಲಿ ಭಾರತದ ಇಂಡಿಗೋ, ಏರ್‌ ಇಂಡಿಯಾ ಹಾಗೂ ವಿಸ್ತಾರ ವಾಯುಯಾನ ಸಂಸ್ಥೆಯ ವಿಮಾನಗಳು ಸೇರಿವೆ. ಸ್ಯಾಟಲೈಟ್‌ ಸಿಗ್ನಲ್‌ಗಳ ಬದಲಾವಣೆಯಿಂದ ಜಿಪಿಎಸ್‌ ರಿಸೀವರ್‌ಗಳು ತಪ್ಪಾದ ಡೆಸ್ಟಿನೇಶನ್‌ ಹಾಗೂ ಟೈಮ್‌ನ್ನ ತೋರಿಸುವ ಸಾಧ್ಯತೆಯಿದೆ ಅಂತ ಅಮೆರಿಕದ ರೆಡಿಯೋ ಟೆಕ್ನಿಕಲ್‌ ಕಮಿಷನ್‌ ಫಾರ್‌ ಏರೋನಾಟಿಕ್ಸ್‌ ಹೇಳಿದೆ. ಅಂದಹಾಗೆ ಈ ರೀತಿ ಜಿಪಿಎಸ್‌ನಲ್ಲಿ ತೊಂದ್ರೆಗಳು ಅಗಾಗ ಉಂಟಾಗ್ತಿರುತ್ತೆ ಆದ್ರೆ ಪ್ಯಾಸೆಂಜರ್‌ ವಿಮಾನಗಳು ಈ ರೀತಿ ಸಿಚುಯೇಶನ್‌ ಫೇಸ್‌ ಮಾಡಿರೋದು ಇದೇ ಮೊದಲು.

-masthmagaa.com

Contact Us for Advertisement

Leave a Reply