ಕೊರೋನಾಗೆ ಬಲಿಯಾದವರ ಅಸಲಿ ಲೆಕ್ಕ ಬಚ್ಚಿಟ್ಟಿತಾ ಅಮೆರಿಕ?

masthmagaa.com:

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಕೊರೋನಾಗೆ ವಿಶ್ವದಲ್ಲೇ ಅತಿ ಹೆಚ್ಚು ಜನ ಬಲಿಯಾಗಿದ್ದಾರೆ. ಆದ್ರೀಗ ಕೊರೋನಾಗೆ ಬಲಿಯಾದವರ ಬಗ್ಗೆ ಕಡಿಮೆ ಲೆಕ್ಕ ವಿಶ್ವದ ಮುಂದಿಡಲಾಗಿದೆ. ಕೊರೋನಾಗೆ ಅಮೆರಿಕದಲ್ಲಿ ಇನ್ನೂ ಜಾಸ್ತಿ ಜನ ಬಲಿಯಾಗಿದ್ದಾರೆ. ಇದ್ರಲ್ಲಿ ಯಾವುದೇ ಅನುಮಾನ ಇಲ್ಲ ಅಂತ ಅಮೆರಿಕದ ಪ್ರಮುಖ ಸಾಂಕ್ರಾಮಿಕ ರೋಗಗಳ ತಜ್ಞ ಅಂಥೋನಿ ಫೌಚಿ ಹೇಳಿದ್ಧಾರೆ. ಈಗಾಗಲೇ ಅಮೆರಿಕ ನೀಡಿರೋ ಲೆಕ್ಕದ ಪ್ರಕಾರ ಅಲ್ಲಿ 5 ಲಕ್ಷದ 81 ಸಾವಿರ ಮಂದಿ ಕೊರೋನಾಗೆ ಬಲಿಯಾಗಿದ್ಧಾರೆ. ಆದ್ರೆ ಯೂನಿವರ್ಸಿಟಿ ಆಫ್ ವಾಷಿಂಗ್ಟನ್ ನೀಡಿರೋ ಅಂಕಿ ಅಂಶಗಳ ಪ್ರಕಾರ ಅಮೆರಿಕದಲ್ಲಿ 9 ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ಧಾರೆ ಅಂತ ಅಂದಾಜು ಮಾಡಿದೆ. ಇದು ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಅಂತ ಪೌಚಿ ಹೇಳಿದ್ಧಾರೆ. ಅಂದ್ರೆ ಈ ಹಿಂದೆ ಟ್ರಂಪ್ ಅಧಿಕಾರದಲ್ಲಿದ್ಧಾಗ ಕೊರೋನಾ ಮೃತಪಟ್ಟವರ ಸಂಖ್ಯೆಯನ್ನು ಕಡಿಮೆ ದಾಖಲಿಸಲಾಗಿದೆ ಅಂತ ಅನುಮಾನ ಮೂಡಿದೆ. ಅಂದಹಾಗೆ ಅಮೆರಿಕದಲ್ಲಿ ಈವರೆಗೆ 3.2 ಕೋಟಿ ಜನರಿಗೆ ಕೊರೋನಾ ತಗುಲಿದ್ದು, 2020ರ ಅಂತ್ಯದಲ್ಲಂತೂ ಇಡೀ ದೇಶವನ್ನು ಮಹಾಮಾರಿ ಹಿಂಡಿ ಹಿಪ್ಪೆ ಮಾಡಿತ್ತು. ಆದ್ರೆ ಜನವರಿ ತಿಂಗಳ ಬಳಿಕ ದೇಶದಲ್ಲಿ ಕೊರೋನಾ ಪ್ರಮಾಣ ನಿರಂತರವಾಗಿ ಇಳಿಯುತ್ತಿದ್ದು, ಲಸಿಕೆ ಅಭಿಯಾನ ಕೂಡ ಮಿಂಚಿನ ವೇಗದಲ್ಲಿ ನಡೀತಾ ಇದೆ. ಈಗಾಗಲೇ ಅಮೆರಿದಲ್ಲಿ ಶೇ.58ರಷ್ಟು ವಯಸ್ಕರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ಹಾಕಲಾಗಿದ್ದು, 10.1 ಕೋಟಿ ಜನರಿಗೆ ಈಗಾಗಲೇ ಎರಡೂ ಡೋಸ್ ಲಸಿಕೆ ಹಾಕಲಾಗಿದೆ.

-masthmagaa.com

Contact Us for Advertisement

Leave a Reply