ಫಿಫಾ ವರ್ಲ್ಡ್‌ಕಪ್‌ಗೆ ಕತಾರ್‌ ನಿರ್ಮಿಸಿರೋ ʻ974ʼ ಸ್ಟೇಡಿಯಂನ ವಿಶೇಷತೆಯೇನು?

masthmagaa.com:

ಕತಾರ್‌ ಇದೇ ಮೊದಲ ಬಾರಿಗೆ ಫಿಫಾ ವರ್ಲ್ಡ್‌ಕಪ್‌ ಆತಿಥ್ಯ ವಹಿಸಿಕೊಂಡಿದ್ದು ಅದ್ರ ಬಗ್ಗೆ ಹಲವಾರು ಟೀಕೆಗಳು ಕೇಳಿಬಂದಿದ್ವು. ಈ ಟೂರ್ನಮೆಂಟ್‌ನ್ನ ಅಯೋಜನೆ ಮಾಡೋಕೆ ಕತಾರ್‌ 7 ನೂತನ ಸ್ಟೇಡಿಯಂಗಳನ್ನ ನಿರ್ಮಾಣ ಮಾಡಿದೆ. ಅದ್ರಲ್ಲಿ ಒಂದು ʻ974ʼ ಹೆಸರಿನ ಸ್ಟೇಡಿಯಂನ ವಿಶೇಷತೆ ಏನು ಅಂದ್ರೆ, ಮರುಬಳಕೆ ಮಾಡಲಾದ ಶಿಪ್ಪಿಂಗ್‌ ಕಂಟೈನರ್‌ಗಳನ್ನ ಅಥ್ವಾ ರಫ್ತು ಮಾಡೋಕೆ ಬಳಸೋ ಬಾಕ್ಸ್‌ಗಳನ್ನ ಎಕ್ಸಾಕ್ಟ್‌ ಆಗಿ ʻ974ʼ ಉಪಯೋಗಿಸ್ಕೊಂಡು ನಿರ್ಮಾಣ ಮಾಡಲಾಗಿದೆ ಅಂತ ಫಿಫಾ ಹೇಳಿದೆ. ಅಷ್ಟೇ ಅಲ್ದೆ ಟೂರ್ನಮೆಂಟ್‌ ಮುಗಿದ ಬಳಿಕ ಇದನ್ನ ತೆಗೆದು ಹಾಕಲಾಗುತ್ತೆ ಹಾಗೂ ಕಂಟೈನರ್‌ಗಳನ್ನ ಮತ್ತೆ ಬಳಕೆ ಮಾಡ್ಬೋದು ಅಂತ ಆಯೋಜಕರು ತಿಳಿಸಿದ್ದಾರೆ. ಅಂದ್ಹಾಗೆ ಈ ಸ್ಟೇಡಿಯಂನಲ್ಲಿರೋ ಸೀಟ್‌ಗಳ ಕೆಪ್ಯಾಸಿಟಿ 40 ಸಾವಿರಕ್ಕು ಹೆಚ್ಚು ಅಂತ ಫಿಫಾ ಹೇಳಿದೆ.

-masthmagaa.com

Contact Us for Advertisement

Leave a Reply