ಟೇಶಿ ವೆಂಕಟೇಶ್ ಆರೋಪದಲ್ಲಿ ಯಾವುದೇ ಹುರುಳಿಲ್ಲ!!

Masthmagaa.com:

ಟೇಶಿ ವೆಂಕಟೇಶ್ ಅವರು ಕನ್ನಡ ನಿರ್ದೇಶಕರ ಸಂಘವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕೆಲ ನಿರ್ದೇಶಕರು ಮತ್ತು ನಿರ್ಮಾಪಕರು ಆರೋಪ ಮಾಡಿದರು.
ರೇಣುಕಾಂಬ ಥಿಯೇಟರ್ ನಲ್ಲಿ ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ನಾಗೇಂದ್ರ ಅರಸ್, ಮಳವಳ್ಳಿ ಸಾಯಿಕೃಷ್ಣ, ನಿರ್ಮಾಪಕರಾದ ಕುಮಾರ್, ಜೆ.ಜೆ. ಶ್ರೀನಿವಾಸ್, ನಾಗೇಶ್ ಕುಮಾರ್ ಮುಂತಾದವರು ಹಾಜರಿದ್ದರು.
ನಾಗೇಂದ್ರ ಅರಸ್ ಮಾತನಾಡಿ, ಸರಕಾರ ಆಹಾರ ಕೋಪನ್, ಸಹಾಯಧನದ ಬಗ್ಗೆ ಟೇಶಿ ವೆಂಕಟೇಶ್ ಸಲ್ಲದ ಆರೋಪ ಮಾಡಿದ್ದಾರೆ. ಅದೆಲ್ಲವೂ ಸುಳ್ಳು. ನಿರ್ದೇಶಕರಿಗೆ ಸರಕಾರದ ಆಹಾರ ಕೋಪನ್ ನೀಡಲಾಗಿದೆ. ಅಲ್ಲದೇ ನಿರ್ದೇಶಕಿ ರೂಪಾ ಅಯ್ಯರ್ ಅವರು ವೈಯಕ್ತಿಕ ಖರ್ಚು ಮಾಡಿಕೊಂಡು ಐಸ್ಮಾನ್ ಕಾರ್ಡ್ ಕೊಡಿಸಿದ್ದಾರೆ. ಸರಕಾರದ ಸಹಾಯ ಪಡೆದು ವ್ಯಾಕ್ಸಿನ್ ಕೊಡಿಸಿದ್ದಾರೆ. ಈಗಲೂ ಸಂಘದ ಉಧ್ಯಾಕ್ಷರಾಗಿ ಅವರು ಸಂಘದ ಸದಸ್ಯರಿಗೆ ಹಲವು ಯೋಜನೆಗಳು ತಲುಪುವಂತೆ ಮಾಡಿದ್ದಾರೆ ಎಂದರು.

ಜನರಲ್ ಬಾಡಿ ಮೀಟಿಂಗ್ ಮಾಡದೇ ಸಂಘಕ್ಕೆ ಹೊಸ ಅಧ್ಯಕ್ಷರ ಘೋಷಣೆ ಮಾಡಲಾಯಿತು. ಈ ಹಿಂದೆ ಅಧ್ಯಕ್ಷರಾಗಿದ್ದ ನಾಗೇಂದ್ರ ಪ್ರಸಾದ್ ಮತ್ತು ಈಗೀನ ಅಧ್ಯಕ್ಷರು ಎಂದು ಹೇಳಿಕೊಳ್ಳುವ ಟೇಶಿ ವೆಂಕಟೇಶ್ ಅವರ ಅವಧಿಯ ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲದೇ ಇರುವ ಕಾರವೇ ಸಾಕಷ್ಟು ಗೊಂದಲಗಳಿ ಕಾರಣವಾಗಿದೆ ಎಂದು ಮಳವಳ್ಳಿ ಸಾಯಿಕೃಷ್ಣ ಹೇಳಿದರು.

ಎರಡು ಸಾವಿರಕ್ಕೂ ಹೆಚ್ಚು ಸದಸ್ಯರಿರುವ ಸಂಘದಲ್ಲಿ ಕೇವಲ ಎಂಬತ್ತು ಜನರ ಮೀಟಿಂಗ್ ಮೂಲಕ ಹೊಸ ಪದಾಧಿಕಾರಿಗಳ ಘೋಷಣೆ ಒಪ್ಪಲಾರದ್ದು. ಚುನಾವಣೆ ಆಗದೇ ಹೇಗೆ ಅಧ್ಯಕ್ಷರ ಆಯ್ಕೆ ಆಯಿತು ಎಂದು ಸಾಯಿಕೃಷ್ಣ ಪ್ರಶ್ನೆ ಮಾಡಿದರು.
ಬೆಂಗಳೂರು ಚಿತ್ರೋತ್ಸವದಲ್ಲಿ ಸಂಘದ ಹೆಸರಿನಲ್ಲಿ ಫಿಲ್ಮಿ ಬಜಾರ್ ಮಾಡಿ, ಅದರಿಂದ ಬಂದ ಹಣದ ಲೆಕ್ಕವನ್ನು ಇನ್ನೂ ಕೊಡದೇ ಇರುವುದಕ್ಕೆ ನಿರ್ಮಾಪಕ ಜೆ.ಜೆ. ಶ್ರೀನಿವಾಸ್ ಆಕ್ಷೇಪ ವ್ಯಕ್ತಪಡಿಸಿದರು.

-masthmagaa.com

Contact Us for Advertisement

Leave a Reply