masthmagaa.com:

ದೇಶಾದ್ಯಂತ ಶನಿವಾರದಿಂದ ಆರಂಭವಾಗಲಿರುವ ಕೊರೋನಾ ಲಸಿಕೆ ಅಭಿಯಾನಕ್ಕೆ ಪುಣೆಯಿಂದ ‘ಕೋವಿಶೀಲ್ಡ್​’ ಲಸಿಕೆ ಪೂರೈಕೆಯಾಗಿದೆ. ಮೊದಲು ಪುಣೆಯ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ ಗೋಡೌನ್​ನಿಂದ ಟ್ರಕ್​ಗಳ ಮೂಲಕ ಪುಣೆ ಏರ್​ಪೋರ್ಟ್​ಗೆ ಲಸಿಕೆ ಪೂರೈಕೆಯಾಯ್ತು. ಅಲ್ಲಿಂದ ಏರ್​ ಇಂಡಿಯಾ, ಸ್ಪೈಸ್​ಜೆಟ್ ಮತ್ತು ಇಂಡಿಗೋ ಏರ್​ಲೈನ್ಸ್​ನ ಒಟ್ಟು 9 ವಿಮಾನಗಳ ಮೂಲಕ 56.5 ಲಕ್ಷ ‘ಕೋವಿಶೀಲ್ಡ್’ ಲಸಿಕೆಯ ಡೋಸ್​ಗಳನ್ನ ದೇಶದ ವಿವಿಧ ಭಾಗಗಳಿಗೆ ಕಳಿಸಿಕೊಡಲಾಗಿದೆ. ಮೊದಲ ವಿಮಾನ ದೆಹಲಿಯ ಇಂದಿರಾ ಗಾಂಧಿ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ಲ್ಯಾಂಡ್​ ಆಯ್ತು. ಬಳಿಕ ಅಹಮದಾಬಾದ್​, ಚೆನ್ನೈ, ಬೆಂಗಳೂರು.. ಹೀಗೆ ಒಂದೊಂದೇ ಕಡೆ ಲಸಿಕೆ ಹೊತ್ತ ವಿಮಾನ ಲ್ಯಾಂಡ್ ಆಗಿವೆ. ಬೆಂಗಳೂರಿನ ಕೆಂಪೇಗೌಡ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ಗೆ ಸ್ಪೈಸ್​ಜೆಟ್​ ವಿಮಾನದ ಮೂಲಕ ಲಸಿಕೆ ಬಂದಿದೆ. ಬೆಂಗಳೂರಿಗೆ 54 ಬಾಕ್ಸ್​ಗಳಲ್ಲಿ ಲಸಿಕೆ ಬಂದಿದೆ ಅಂತ ಹೇಳಲಾಗ್ತಿದೆ. ಈ ಲಸಿಕೆಯನ್ನ ಆನಂದ್​ರಾವ್ ಸರ್ಕಲ್​ ಬಳಿ ಇರುವ ಆರೋಗ್ಯ ಕೇಂದ್ರದಲ್ಲಿ ಸಂಗ್ರಹಿಸಿಡಲಾಗುತ್ತೆ. ಇಲ್ಲಿಂದ ಉಳಿದ ಜಿಲ್ಲೆಗಳಿಗೆ ಸಪ್ಲೈ ಆಗಲಿದೆ. ರಾಜ್ಯದಲ್ಲಿ ಬೆಂಗಳೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಲಸಿಕೆಯ ದೊಡ್ಡ ದಾಸ್ತಾನು ವ್ಯವಸ್ಥೆ ಇದೆ. ಕೇಂದ್ರ ಸರ್ಕಾರ ನಿನ್ನೆಯಷ್ಟೇ ‘ಕೋವಿಶೀಲ್ಡ್​’ ಲಸಿಕೆಯ 1.10 ಕೋಟಿ ಡೋಸ್​ಗಳಿಗೆ ಆರ್ಡರ್ ಕೊಟ್ಟಿತ್ತು. ಆರ್ಡರ್ ಕೊಟ್ಟ ಒಂದೇ ದಿನದಲ್ಲಿ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ದೇಶದ ಹಲವು ಭಾಗಗಳಿಗೆ 56.5 ಡೋಸ್​ಗಳನ್ನ ಕಳಿಸಿಕೊಟ್ಟಿದೆ. ಉಳಿದ ಡೋಸ್​ಗಳು ಮುಂದಿನ ಹಂತದಲ್ಲಿ ಸಪ್ಲೈ ಆಗಲಿದೆ.

-masthmagaa.com

Contact Us for Advertisement

Leave a Reply