ಪತ್ರಕರ್ತೆ ಸೌಮ್ಯ ವಿಶ್ವನಾಥನ್‌ ಮರ್ಡರ್‌ ಕೇಸ್‌ನಲ್ಲಿ 5 ಆರೋಪಿಗಳು ಅಂದರ್‌!

masthmagaa.com:

ದೆಹಲಿಯ ಪತ್ರಕರ್ತೆ ಸೌಮ್ಯ ವಿಶ್ವನಾಥನ್‌ ಕೊಲೆ ಪ್ರಕರಣದಲ್ಲಿ, ನಾಲ್ಕು ಆರೋಪಿಗಳನ್ನ ದೆಹಲಿ ಹೈ ಕೋರ್ಟ್‌ ದೋಷಿ ಅಂತ ತೀರ್ಪು ನೀಡಿದೆ. ಕಳ್ಳತನದ ಆಸ್ತಿ ಪಡೆದಿದ್ದಕ್ಕಾಗಿ ಮತ್ತೊಬ್ಬ ವ್ಯಕ್ತಿಯನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. MCOCA ಅಂದ್ರೆ Maharashtra Control of Organised Crime Act ಕೂಡ ಈ ಐದು ಆರೋಪಿಗಳನ್ನ ದೋಷಿ ಅಂತ ಪರಿಗಣಿಸಿತ್ತು. ಸೌಮ್ಯ ವಿಶ್ವನಾಥನ್‌ ಕೊಲೆ ನಡೆದು 15 ವರ್ಷಗಳೇ ಕಳೆದಿದೆ. ಸೆಪ್ಟೆಂಬರ್‌ 30, 2008 ರಂದು ದೆಹಲಿಯ ನೆಲ್ಸನ್‌ ಮಂಡೇಲಾ ಮಾರ್ಗ್‌ನಲ್ಲಿ ಸೌಮ್ಯ ಕೆಲಸ ಮುಗಿಸಿ ಕಾರ್‌ನಲ್ಲಿ ಮನೆಗೆ ವಾಪಸ್ಸಾಗುತ್ತಿರೋ ಟೈಮ್‌ನಲ್ಲಿ ಆಕೆಯನ್ನ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಕಳ್ಳತನ ಮಾಡಲು ಕೊಲೆಯನ್ನ ಮಾಡಲಾಗಿದೆ ಅಂತ ಪೊಲೀಸ್‌ ಕೊಲೆಗೆ ಕಾರಣವನ್ನ ಪತ್ತೆ ಹಚ್ಚಿದ್ದರು. ಸೌಮ್ಯ ವಿಶ್ವನಾಥನ್‌ ಕೊಲೆ ಸಂಬಂಧ ಅಂದು, ರವಿ ಕಪೂರ್‌, ಅಮಿತ್‌ ಶುಕ್ಲಾ, ಬಲ್ಜೀತ್‌ ಮಲಿಕ್‌, ಅಜಯ್‌ ಕುಮಾರ್‌ ಮತ್ತು ಅಜಯ್‌ ಸೇತಿಯನ್ನ ಬಂಧಿಸಿ ಮಾರ್ಚ್‌ 2009 ರಿಂದ ಪೊಲೀಸ್‌ ಕಸ್ಟಡಿಯಲ್ಲಿ ಇರಿಸಲಾಗಿತ್ತು.

-masthmagaa.com

Contact Us for Advertisement

Leave a Reply