ಭಾರತದ ಷೇರು ಮಾರುಕಟ್ಟೆಯಲ್ಲಿ ವಿದೇಶಿಗರ ಹೂಡಿಕೆ ಹೆಚ್ಚಳ!

masthmagaa.com:

ವಿದೇಶಿ ಹೂಡಿಕೆದಾರರು ಇದೀಗ ಭಾರತದ ಷೇರು ಮಾರುಕಟ್ಟೆ ಕಡೆ ಮುಖ ಮಾಡಿದ್ದಾರೆ. ಭಾರತದ ಷೇರು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡೋದನ್ನ ಕಂಟಿನ್ಯೂ ಮಾಡಿದ್ದಾರೆ. ಮಾರ್ಚ್‌ ತಿಂಗಳ ಮೊದಲೆರಡು ವಾರಗಳಲ್ಲಿ ಒಟ್ಟು 40,710 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನ ಖರೀದಿಸಿದ್ದಾರೆ. ಅದರೆ ಫೆಬ್ರುವರಿ ತಿಂಗಳಲ್ಲಿ ಭಾರತದಲ್ಲಿ ವಿದೇಶಿ ಹೂಡಿಕೆ ಕಡಿಮೆಯಿತ್ತು. ಆ ಟೈಮಲ್ಲಿ ಸುಮಾರು 1,539 ಕೋಟಿ ರೂಪಾಯಿ ಇನ್ವೆಸ್ಟ್‌ ಮಾಡಿದ್ರು. ಕಳೆದ ಜನವರಿ ತಿಂಗಳಲ್ಲಿ ಔಟ್‌ಫ್ಲೋ ಜಾಸ್ತಿಯಿತ್ತು ಅಂದ್ರೆ ಹೂಡಿಕೆದಾರರ ಹೂಡಿಕೆ ಹಿಂತೆಗೆದ ಹೆಚ್ಚಾಗಿತ್ತು. ಒಟ್ಟು 25,743 ಕೋಟಿ ರೂಪಾಯಿ ಔಟ್‌ಫ್ಲೋ ಆಗಿತ್ತು. ಆದ್ರೆ ಈಗ ಮಾರ್ಚ್‌ನಲ್ಲಿ ಮಾತ್ರ ಭಾರತದ ಷೇರು ಮಾರುಕಟ್ಟೆಯಲ್ಲಿ ವಿದೇಶಿಗರೇ ಬಿಗ್‌ ಬೈಯರ್ಸ್‌ ಆಗಿದ್ದಾರೆ. ಈ ಮೂಲಕ ವಿದೇಶಿ ಹೂಡಿಕೆದಾರರ ಏರಿಕೆ ಟ್ರೆಂಡ್‌ ಕಂಟಿನ್ಯೂ ಆಗಿದೆ.

-masthmagaa.com

Contact Us for Advertisement

Leave a Reply