ಫ್ರಾನ್ಸ್‌ ದೇಶಾದ್ಯಂತ ಕಟ್ಟೆಚ್ಚರ! ಐಎಸ್‌ ಉಗ್ರ ದಾಳಿ ಸಂಭವ!

masthmagaa.com:

ರಷ್ಯಾದಲ್ಲಿ ಉಗ್ರದಾಳಿಯಾದ ಬೆನ್ನಲ್ಲೇ ಯುರೋಪ್‌ ಅಕ್ಷರಶಃ ಬೆಚ್ಚಿಬಿದ್ದಿದೆ. ಇದೀಗ ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿರೋ ಫ್ರಾನ್ಸ್‌ ತಮ್ಮ ಪ್ರಜೆಗಳಿಗೆ ಉಗ್ರ ದಾಳಿ ಬಗ್ಗೆ ಎಚ್ಚರಿಕೆ ನೀಡಿದೆ. ಫ್ರಾನ್ಸ್‌ ಪ್ರಧಾನಿ ಗೇಬ್ರಿಯಲ್‌ ಅಟಲ್‌ ಅವರು ಫ್ರಾನ್ಸ್ ಅಧ್ಯಕ್ಷರಾದ ಇಮಾನ್ಯುಯಲ್‌ ಮ್ಯಾಕ್ರನ್‌ರೊಂದಿಗೆ ಮಾತುಕತೆ ನಡೆಸಿ ಮಾರ್ಚ್‌ 24ರಂದು ಅಲರ್ಟ್‌ ಘೋಷಿಸಿದ್ದಾರೆ. ʻರಷ್ಯಾದಲ್ಲಿ ನಡೆದ ದಾಳಿ ಹೊಣೆಯನ್ನ ಐಎಸ್‌ ಉಗ್ರ ಸಂಘಟನೆ ಹೊತ್ಕೊಂಡಿದೆ. ಸೋ ನಮ್ಮ ದೇಶದಲ್ಲೂ ಐಎಸ್‌ ಉಗ್ರ ದಾಳಿಯಾಗೋ ಸಾಧ್ಯತೆಯಿದೆ…ಹೀಗಾಗಿ ಇಡೀ ದೇಶ ತೀವ್ರ ಕಟ್ಟೆಚ್ಚರದಿಂದಿರಿ ಅಂತೇಳಿದ್ದಾರೆ. ಅಂದ್ಹಾಗೆ ಫ್ರಾನ್ಸ್‌ನಲ್ಲಿ ಮೂರು ಹಂತಗಳಲ್ಲಿ ಉಗ್ರರ ದಾಳಿಗೆ ಎಚ್ಚರಿಕೆ ನೀಡೋ ಸಿಸ್ಟಮ್‌ ಇದೆ. ಮೊದಲನೇದು ಕಡಿಮೆ…ಎರಡನೇದು ಮಧ್ಯಮ ಮೂರನೇದು ಹೈ ಲೆವೆಲ್‌. ಸೋ ಈ ಪೈಕಿ ಈಗ ಹೈ ಲೆವೆಲ್‌ನ ಎಚ್ಚರಿಕೆ ನೀಡಲಾಗಿದೆ. ಇದರ ಪ್ರಕಾರವಾಗಿ ಫ್ರಾನ್ಸ್‌ನ ಸಾರ್ವಜನಿಕ ಸ್ಥಳಗಳಾದ ರೈಲ್ವೇ ಸ್ಟೇಷನ್‌, ಏರ್‌ಪೋರ್ಟ್‌ಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಸೇನಾ ಪಡೆಗಳು ತಮ್ಮ ಕಣ್ಗಾವಲನ್ನ ಹೆಚ್ಚಿಸಿವೆ. ದೇಶದ್ಯಾಂತ ಹೊರ ಹೋಗುವ ಹೊರಬರುವವರ ಮೇಲೆ ನಿಗಾ ಇಡಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ವಿಚಾರದಲ್ಲೂ ಕ್ರಮ ತೆಗೆದುಕೊಳ್ಳೋಕೆ ಅಲ್ಲಿನ ಸರ್ಕಾರ ಸೂಚಿಸಿದೆ. ಅಂದ್ಹಾಗೆ ಫ್ರಾನ್ಸ್‌ ಒಂದು ಸೂಕ್ಷ್ಮ ದೇಶವಾಗಿದ್ದು ಇತ್ತೀಚಿಗೆ ಅಲ್ಲಿ ಧಾರ್ಮಿಕ ಮೂಲಭೂತವಾದ ಜಾಸ್ತಿ ಆಗಿದೆ. ಸಾಕಷ್ಟು ಬಾರಿ ಐಎಸ್‌ ಉಗ್ರ ದಾಳಿಗಳು ನಡೆದಿತ್ತು. 2015ರಲ್ಲೇ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಉಗ್ರದಾಳಿಯಾಗಿತ್ತು. 2015ರ ಜನವರಿಯಿಂದ 2016ರ ಜುಲೈ ತನಕ ಫ್ರಾನ್ಸ್‌ನಲ್ಲಿ 8 ಉಗ್ರ ದಾಳಿ ನಡೆದಿದ್ವು. ಪ್ರವಾದಿಗಳಿಗೆ ಅವಮಾನ ಮಾಡಲಾಗಿದೆ ಅಂತೇಳಿ ಶಿಕ್ಷಕರನ್ನೂ ಹತ್ಯೆ ಮಾಡಲಾಗಿತ್ತು. ಸೋ ಈ ಎಲ್ಲಾ ಕಾರಣಗಳಿಂದ ಫ್ರಾನ್ಸ್‌ ಧಾರ್ಮಿಕವಾಗಿ ಅತ್ಯಂತ ಸೂಕ್ಷ್ಮ ದೇಶ ಅಂತ ಕರೆಸಿಕೊಳ್ತಿತ್ತು. ಈಗ ರಷ್ಯಾದಲ್ಲಿ ದಾಳಿಯಾದ ಬೆನ್ನಲ್ಲೇ ಅಲರ್ಟ್‌ ಘೋಷಿಸಲಾಗಿದೆ.

-masthmagaa.com

Contact Us for Advertisement

Leave a Reply