ಜಾರ್ಜ್‌ ಸೊರೊಸ್‌ 2 ಲಕ್ಷ ಕೋಟಿ ಸಾಮ್ರಾಜ್ಯ ಯಾರ ಪಾಲಾಗುತ್ತೆ ಗೊತ್ತಾ?

masthmagaa.com:

ಹಂಗೇರಿ ಮೂಲದ ಅಮೆರಿಕದ ಶ್ರೀಮಂತ ಹೂಡಿಕೆದಾರ ಜಾರ್ಜ್‌ ಸೊರೋಸ್‌ ತಮ್ಮ 25 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 2 ಲಕ್ಷ ಕೋಟಿ ಮೌಲ್ಯದ ಸಾಮ್ರಾಜ್ಯವನ್ನ ತನ್ನ 37 ವರ್ಷದ ಮಗ ಅಲೆಕ್ಸಾಂಡರ್‌ ಸೊರೋಸ್‌ಗೆ ವಹಿಸ್ತಿದಾರೆ ಎನ್ನಲಾಗಿದೆ. ವಾಲ್‌ ಸ್ಟ್ರೀಟ್‌ ಜರ್ನಲ್‌ಗೆ ನೀಡಿರುವ ಸಂದರ್ಶನದಲ್ಲಿ ಅಲೆಕ್ಸಾಂಡರ್‌ ಈ ಸುದ್ದಿಯನ್ನ ತಿಳಿಸಿದ್ದಾರೆ. ಜೊತೆಗೆ ಬಹುಚರ್ಚಿತ ಓಪನ್‌ ಸೊಸೈಟಿ ಫೌಂಡೇಷನ್ಸ್‌(OSF)ನ ಅಧಿಕಾರವನ್ನ ಸಹ ತಮಗೆ ನೀಡಿರೋದಾಗಿ ಅಲೆಕ್ಸಾಂಡರ್‌ ಹೇಳಿದ್ದಾರೆ. ಅಂದ್ಹಾಗೆ ಜಾರ್ಜ್‌ ಸೊರೊಸ್‌ ವಿಶ್ವದ ಬಹುದೊಡ್ಡ ಫಿಲಾಂಥ್ರಪಿಸ್ಟ್‌ ಅಂದ್ರೆ ಉದಾರವಾದಿಯಾಗಿದ್ದು ತಮ್ಮ ಸಂಪತ್ತಿನ 64% ಹಣವನ್ನ ದಾನ ಮಾಡಿದ್ದಾರೆ. ಆದ್ರೆ ಇದೆ ವೇಳೆ ದಾನದ ಹೆಸರಿನಲ್ಲಿ ಇವ್ರು ಅನ್ಯ ದೇಶಗಳ ಆಂತರಿಕ ರಾಜಕೀಯದಲ್ಲಿ ತಲೆಹಾಕ್ತಾರೆ ಅನ್ನೋ ಆರೋಪ ಕೂಡ ಇವ್ರ ಮೇಲೆ ಇದೆ.

-masthmagaa.com

Contact Us for Advertisement

Leave a Reply