ಭಾರತ್‌ ಬಯೋಟೆಕ್‌ನ ಕೋವಿಡ್‌ ಲಸಿಕೆಗೆ ಅನುಮತಿ ಕೊಟ್ಟ ಜರ್ಮನಿ

masthmagaa.com:

ಜೂನ್‌ ಒಂದರಿಂದ ಭಾರತ್ ಬಯೋಟೆಕ್‌ನ ಕೋವಿಡ್ -19 ಲಸಿಕೆಯನ್ನ ಪ್ರಯಾಣ ಉದ್ದೇಶಕ್ಕಾಗಿ ಹಾಕಿಕೊಳ್ಳುವವರಿಗೆ ಯುರೋಪಿನ ದೇಶ ಜರ್ಮನಿ ಅನುಮತಿ ಕೊಟ್ಟಿದೆ. ಹೀಗಂತ ಜರ್ಮನಿಯ ಭಾರತ ಮತ್ತು ಭೂತಾನ್‌ ರಾಯಭಾರಿ ವಾಲ್ಟರ್ ಜೆ ಲಿಂಡ್ನರ್ ಹೇಳಿದ್ದಾರೆ. ಇನ್ನು ಕಳೆದ ವರ್ಷ WHO ಕೋವ್ಯಾಕ್ಸಿನ್‌ ಅನ್ನ ತುರ್ತು ಬಳಕೆಗೆ ಅನುಮತಿ ನೀಡಿತ್ತು. ಹಾಗೆ ಆಸ್ಟ್ರೇಲಿಯಾ, ಜಪಾನ್‌ ಮತ್ತು ಕೆನಡಾ ಸೇರಿ ಕೆಲವೊಂದು ದೇಶ ಕೋವ್ಯಾಕ್ಸಿನ್‌ ಲಸಿಕೆ ಹಾಕಿಸಿಕೊಂಡವರಿಗೆ ತಮ್ಮ ದೇಶಕ್ಕೆ ಪ್ರಯಾಣಿಸಲು ಅನುಮತಿ ಕೊಟ್ಟಿದೆ.

-masthmagaa.com

Contact Us for Advertisement

Leave a Reply