ದೆಹಲಿಯ ರಾಷ್ಟ್ರಪತಿ ಭವನದಲ್ಲಿರೋ ಮೊಗಲ್‌ ಗಾರ್ಡನ್‌ ಇನ್ಮುಂದೆ ಅಮೃತ್‌ ಉದ್ಯಾನ್!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ದೆಹಲಿಯ ಐತಿಹಾಸಿಕ ಮೊಗಲ್‌ ಗಾರ್ಡನ್‌ ಹೆಸರನ್ನ ಅಮೃತ್‌ ಉದ್ಯಾನ್‌ ಅಂತ ಮರು ನಾಮಕರಣ ಮಾಡಲಾಗಿದೆ. ರಾಷ್ಟ್ರಪತಿ ಭವನದ ಹೃದಯ ಭಾಗದಲ್ಲಿರೋ ಈ ಉದ್ಯಾನವನಕ್ಕೆ ಈಗ ಅಮೃತ್‌ ಉದ್ಯಾನ್‌ ಅಂತ ಹೆಸರಿಡಲಾಗಿದೆ. ನಾವಿಕಾ ಗುಪ್ತ, ಇವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಡೆಪ್ಯುಟಿ ಪ್ರೆಸ್‌ ಸೆಕ್ರಟ್ರಿ. ಇವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 75ನೇ ಸ್ವಾತಂತ್ರ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ..ರಾಷ್ಟ್ರಪತಿ ಭವನದಲ್ಲಿರೋ ಮೊಗಲ್‌ ಗಾರ್ಡನ್‌ ಹೆಸರನ್ನ ಅಮೃತ್‌ ಉದ್ಯಾನ್‌ ಅಂತ ಚೇಂಜ್‌ ಮಾಡಲಾಗಿದೆ ಅಂತ ಹೇಳಿದಾರೆ. ಇನ್ನು ವರ್ಷಕ್ಕೆ ಒಮ್ಮೆ ಸಾರ್ವಜನಿಕ ಪ್ರವೇಶಕ್ಕೆ ಅಂತ ಈ ಗಾರ್ಡನ್‌ ಅನ್ನ ಓಪನ್‌ ಮಾಡಲಾಗುತ್ತೆ. ಇದೇ ಜನವರಿ ಅಂತ್ಯ ಅಥವಾ ಫೆಬ್ರವರಿ ಆರಂಭದಲ್ಲಿ ಇದನ್ನ ಸಾರ್ವಜನಿಕರ ಭೇಟಿಗೆ ಮುಕ್ತ ಮಾಡಲಾಗುತ್ತಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕಾರ್ಯಕ್ರಮಕ್ಕೆ ಚಾಲನೆ ಕೊಡಲಿದ್ದಾರೆ. ಅದಕ್ಕೂ ಮುನ್ನವೇ ಈಗ ಹೆಸರನ್ನ ಚೇಂಜ್‌ ಮಾಡಲಾಗಿದೆ. ಅಂದ್ಹಾಗೆ ಈ ಉದ್ಯಾನವನ್ನ ಸರ್‌ ಎಡ್ವಿನ್‌ ಅನ್ನೋರು 1917ರಲ್ಲಿ ಡಿಸೈನ್‌ ಮಾಡಿದ್ರು. 1928 ರಿಂದ 1929ರವರೆಗ ಈ ಗಾರ್ಡನ್ ಸಿದ್ದವಾಗಿತ್ತು. ಬ್ರಿಟಿಷರು ಮೊಗಲರ ಗಾರ್ಡನ್‌ ತರನೇ ಇದನ್ನೂ ನಿರ್ಮಾಣ ಮಾಡಿದ್ದರಿಂದ ಇದಕ್ಕೆ ಮೊಗಲ್‌ ಗಾರ್ಡನ್‌ ಅಂತಲೇ ಹೆಸರು ಇಟ್ಟಿದ್ರು. ಆದ್ರೆ ಸ್ವಾತಂತ್ರ ಬಂದ್ಮೇಲೆ ಈ ಹೆಸರನ್ನ ಚೇಂಜ್‌ ಮಾಡಬೇಕು ಅಂತ ಅನೇಕ ಸಲ ಕೂಗು ಕೇಳಿ ಬಂದಿತ್ತು. ಹಿಂದೂಪರ ಸಂಘಟನೆಗಳು ಈ ಬಗ್ಗೆ ಅನೇಕ ಒತ್ತಾಯಗಳನ್ನೂ ಮಾಡಿದ್ರು‌. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಈಗ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

-masthmagaa.com

Contact Us for Advertisement

Leave a Reply