ಸರ್ಕಾರ ಮಧ್ಯ ಪ್ರವೇಶದಿಂದ ಈರುಳ್ಳಿ ಮಾರ್ಕೆಟ್‌ ಕೊಂಚ ನಿರಾಳ!

masthmagaa.com:

ಈರುಳ್ಳಿ ಬಿಸಿ ತಾಕುತ್ತಿದ್ದಂತೆ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರದ ಕ್ರಮಗಳಿಂದ ಈರುಳ್ಳಿ ಮಾರ್ಕೆಟ್‌ ಕೊಂಚ ನಿರಾಳವಾಗಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯ ಆಯ್ದ ನಗರಗಳಲ್ಲಿ ಕೆಜಿಗೆ 25 ರೂಪಾಯಿ ಸಬ್ಸಿಡಿಯಲ್ಲಿ ಹೆಚ್ಚು ಹೆಚ್ಚು ಈರುಳ್ಳಿಯನ್ನ ಮಾರಾಟ ಮಾಡಿ ಬೇಡಿಕೆಯನ್ನ ಕಂಟ್ರೋಲ್‌ ಮಾಡಿದೆ. ಈ ತಿಂಗಳಲ್ಲಿ ಒಂದು ಲಕ್ಷ ಟನ್‌ ಈರುಳ್ಳಿಯನ್ನ ರಿಟೇಲ್ ಮಾರ್ಕೆಟ್‌ಗೆ ತರೋಕೆ ಸಚಿವಾಲಯ ಪ್ಲಾನ್‌ ಮಾಡಿದೆ. ಮಿನಿಮಮ್‌ ಎಕ್ಸ್‌ಪೋರ್ಟ್‌ ಪ್ರೈಸ್‌(MEP) ಯನ್ನ ಟನ್‌ಗೆ 800 ಡಾಲರ್‌, ಅಂದ್ರೆ ಸುಮಾರು 66 ಸಾವಿರಕ್ಕೆ ಫಿಕ್ಸ್‌ ಮಾಡಿ, ರಫ್ತು ದರವನ್ನ 40% ಹೆಚ್ಚಿಸಿದ್ದಕ್ಕೆ ಈರುಳ್ಳಿ ದೇಶದ ಮಾರ್ಕೆಟ್‌ನಲ್ಲಿ ಉಳಿದು, ಹೋಲ್‌ಸೇಲ್‌ ಬೆಲೆಯಲ್ಲಿ ಇಳಿಕೆ ಕಂಡಿದೆ ಅಂತ ವ್ಯಾಪಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply