ಗಾಜಾದಲ್ಲಿ ಬಂಧಿಸಲಾಗಿರೊ 40 ಒ‌ತ್ತೆಯಾಳು ಜೀವಂತವಾಗಿಲ್ಲ: ಹಮಾಸ್!

masthmagaa.com:

ಅಕ್ಟೋಬರ್‌ 7ರ ದಾಳಿಯಲ್ಲಿ ಹಮಾಸ್‌ ವಶಪಡಿಸಿಕೊಂಡ ಒತ್ತೆಯಾಳುಗಳ ಪೈಕಿ, 40 ಒತ್ತೆಯಾಳುಗಳು ಜೀವಂತವಾಗಿಲ್ಲ ಅಂತ ಸ್ವತಃ ಹಮಾಸ್‌ ಶಾಕಿಂಗ್‌ ಮಾಹಿತಿ ಕೊಟ್ಟಿದೆ. ಗಾಜಾದಲ್ಲಿ ಕದನ ವಿರಾಮ ಘೋಷಣೆ ಸಂಬಂಧ ಒತ್ತೆಯಾಳುಗಳ ಬಿಡುಗಡೆಗಾಗಿ ಅಮೆರಿಕದ ಸೆಂಟ್ರಲ್‌ ಇಂಟಲಿಜೆನ್ಸಿ ಏಜೆನ್ಸಿ(CIA) ಒತ್ತೆಯಾಳುಗಳ ಬಿಡುಗಡೆ ಪ್ರಸ್ತಾವ ಮುಂದಿಟ್ಟಿತ್ತು. ಇದ್ರಲ್ಲಿ ಇಸ್ರೇಲ್‌ನಲ್ಲಿ ಬಂಧಿತರಾಗಿರೊ, ಜೀವಾವಧಿ ಶಿಕ್ಷೆಗೆ ಒಳಗಾಗಿರೊ 100 ಖೈದಿಗಳು ಸೇರಿದಂತೆ ಪಟ್ಟು 700 ಪ್ಯಾಲಸ್ತೀನಿಯರನ್ನ ಬಿಡುಗಡೆ ಮಾಡೋದು. ಹಾಗೇ ಗಾಜಾದಲ್ಲಿ ಹಮಾಸ್‌ ವಶದಲ್ಲಿರೋ ಮಹಿಳೆಯರು, ಮಕ್ಕಳು ಸೇರಿದಂತೆ 40 ಒತ್ತೆಯಾಳುಗಳನ್ನ ರಿಲೀಸ್‌ ಮಾಡೊ ಪ್ರಸ್ತಾವ ಇದಾಗಿತ್ತು. ಆದ್ರೆ ಹಮಾಸ್‌ ಈಗ ತಾನು ಬಂಧಿಸಿದ್ದ 40 ಒತ್ತೆಯಾಳುಗಳು ಬದುಕೇ ಇಲ್ಲ ಅಂತೇಳಿದೆ. ಅಲ್ದೇ ಸೋಮವಾರ ಈಜಿಪ್ಟ್‌ ರಾಜಧಾನಿ ಕೈರೋದಲ್ಲಿ ಇಸ್ರೇಲ್‌ ನಡೆಸಿದ ಕದನ ವಿರಾಮ ಮಾತುಕತೆಯನ್ನ ನಾವು ರಿಜೆಕ್ಟ್‌ ಮಾಡಿದ್ದೇವೆ ಅಂತ ಹಮಾಸ್‌ ಹೇಳಿದೆ. ಇನ್ನು ಈ ಬಗ್ಗೆ ಮಾತನಾಡಿರೊ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಯುದ್ದದಲ್ಲಿ ಗೆದ್ದು, ಬಂಧಿತವಾಗಿರೊ ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನ ರಿಲೀಸ್‌ ಮಾಡ್ತೀವಿ ಅಂತೇಳಿದ್ದಾರೆ. ಈ ಮೂಲಕ ಗಾಜಾ ಕದನ ವಿರಾಮದ ಮಾತು ಮತ್ತೊಮ್ಮೆ ಮುರಿದು ಬಿದ್ದಿದೆ.

-masthmagaa.com

Contact Us for Advertisement

Leave a Reply