ತಾತ್ಕಾಲಿಕ ಅಲ್ಲ ಸಂಪೂರ್ಣ ಕದನ ವಿರಾಮ ಬೇಕು: ಹಮಾಸ್‌

masthmagaa.com:

ಗಾಜಾ ಯುದ್ಧ ಕದನ ವಿರಾಮ ವಿಚಾರವಾಗಿ ಇದೀಗ ಹಮಾಸ್‌ ಉಗ್ರಸಂಘಟನೆ ಹೊಸ ಬೇಡಿಕೆಯನ್ನಿಟ್ಟಿದೆ. ʻನಮಗೆ ತಾತ್ಕಾಲಿಕ ಕದನ ವಿರಾಮ ಬೇಡ, ಬದಲಿಗೆ ಸಂಪೂರ್ಣ ಮತ್ತು ಸಮಗ್ರ ಕದನ ವಿರಾಮ ಬೇಕು. ಒಮ್ಮೆ ಗಾಜಾ ಯುದ್ಧ ನಿಂತ್ಮೇಲೆ, ಉಳಿದ ವಿಷಯಗಳು ಅಂದ್ರೆ ಒತ್ತೆಯಾಳುಗಳ ರಿಲೀಸ್‌ ಬಗ್ಗೆ ಡಿಸ್‌ಕಸ್‌ ಮಾಡೋಣʼ ಅಂತ ಹೇಳಿದೆ. ಅಂದ್ಹಾಗೆ ಕತಾರ್‌ ಪ್ರಧಾನಿ ಶೇಖ್‌ ಮೊಹಮ್ಮದ್‌ ಬಿನ್‌ ಅಬ್ದುಲ್‌ ರಹಮಾನ್‌ ಅಲ್‌ ಥಾನಿ ಅವ್ರು ಜನವರಿ 29ರಂದು ಗಾಜಾ ಕದನ ವಿರಾಮ ಕುರಿತು ಹೇಳಿಕೆ ನೀಡಿದ್ರು. ಗಾಜಾ ಯುದ್ಧಕ್ಕೆ ತಾತ್ಕಾಲಿಕ ಒಪ್ಪಂದದ ಚೌಕಟ್ಟನ್ನು ಪ್ರಸ್ತಾಪಿಸಲಾಗಿದೆ ಅಂತ ಹೇಳಿದ್ರು. ಇದ್ರ ಬೆನ್ನಲ್ಲೇ ಹಮಾಸ್‌ ಉಗ್ರ ಸಂಘಟನೆ ಈ ರೀತಿ ಆಗ್ರಹ ಮಾಡಿದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply