ಮತ್ತೆ ಬಂತು ಹ್ಯಾಪಿ ಹೈಪಾಕ್ಸಿಯ ಖಾಯಿಲೆ! ಏನಿದರ ಎಫೆಕ್ಟ್?

masthmagaa.com:

ಕೋವಿಡ್‌ 19 ಟೈಮಲ್ಲಿ ಜಾಸ್ತಿಯಾಗಿದ್ದ ಹ್ಯಾಪಿ ಹೈಪಾಕ್ಸಿಯ ಕೇಸ್‌ಗಳು ಬಾರಿ ಪ್ರಮಾಣದಲ್ಲಿ ವರದಿಯಾಗಿವೆ. ಹ್ಯಾಪಿ ಹೈಪಾಕ್ಸಿಯ ಅಂದ್ರೆ ಶ್ವಾಸಕೋಶದಲ್ಲಿನ ಅಕ್ಸಿಜನ್‌ ಪ್ರಮಾಣ ಅಥ್ವಾ ಸ್ಯಾಚುರೇಶನ್‌ ಲೆವೆಲ್‌ ಕಡಿಮೆಯಾಗೋದು. ನಮ್ಮ ಲಂಗ್ಸ್‌ನಲ್ಲಿ ಯಾವಾಗ್ಲೂ 95% ಸ್ಯಾಚುರೇಶನ್‌ ಲೆವೆಲ್‌ ಇರುತ್ತೆ. ಇದಕ್ಕಿಂತ ಕಡಿಮೆಯಾದ್ರೆ ಅದನ್ನೇ ಹೈಪಾಕ್ಸಿಯಾ ಅಂತಾರೆ. ಸಾಮಾನ್ಯವಾಗಿ ಇದು ಶ್ವಾಸಕೋಶ ಸಂಬಂಧಿ ಖಾಯಿಲೆ ಇರೋರಲ್ಲಿ ಕಾಣಿಸಿಕೊಳ್ಳುತ್ತೆ. ಕೋವಿಡ್‌ ಟೈಮ್ನಲ್ಲಿ ಇದು ಬಹಳ ಹೆಚ್ಚಾಗಿತ್ತು. ಅದಕ್ಕೇ ಕೃತಕ ಆಕ್ಸಿಜನ್‌ಗೆ ಅಷ್ಟು ಬೇಡಿಕೆ ಇದ್ದದ್ದು. ಇದೀಗ ಕೊಲ್ಕತ್ತಾದ ಪ್ರೈವೇಟ್‌ ಆಸ್ಪತ್ರೆ ಒಂದ್ರಲ್ಲಿ ಹಲವಾರು ಜನರಿಗೆ ಈ ಖಾಯಿಲೆ ಕಾಣಿಸಿಕೊಂಡಿದೆ. BP Poddar ಆಸ್ಪತ್ರೆಯ ಕೆಲವು ಲಂಗ್‌ ಡಿಸೀಸ್‌ ಪೇಶೆಂಟ್‌ಗಳಿಗೆ ಸ್ಯಾಚುರೇಶನ್‌ ಲೆವೆಲ್‌ 75-80ಕ್ಕೆ ಇಳಿದ್ರು, ಅವ್ರು ಆರಾಮವಾಗಿ ಉಸಿರಾಡ್ಕೊಂಡಿದ್ದಾರೆ. ಇದು ಆಶ್ಚರ್ಯದ ಸಂಗತಿಯಾಗಿದ್ರು, ಬ್ರೈನ್‌ನಲ್ಲಿರೋ ಉಸಿರಾಟ ಕೇಂದ್ರ ಕಡಿಮೆ ಆಕ್ಸಿಜನ್‌ ಲೆವೆಲ್‌ಗೆ ಅಡಾಪ್ಟ್‌ ಆಗಿರ್ಬೋದು. ಅದ್ರಿಂದ ಇವ್ರಿಗೆ ತೊಂದ್ರೆ ಆಗ್ತಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply