ಉಗ್ರ ಸರ್ಕಾರ ತಾಲಿಬಾನ್‌ಲ್ಲೂ ಬಣ ಬಡಿದಾಟ!

masthmagaa.com:

ಅಫ್ಘಾನ್‌ ಆಳ್ತಿರುವ ಉಗ್ರ ಸರ್ಕಾರ ತಾಲಿಬಾನ್‌ನಲ್ಲಿ ಬಣ ಗಲಾಟೆ ಜೋರಾಗಿದೆ. ಇದೀಗ ಅಫ್ಘಾನ್‌ ಹಂಗಾಮಿ ಆಂತರಿಕ ಸಚಿವ ಸಿರಾಜುದ್ದಿನ್‌ ಹಕ್ಕಾನಿ ಮಹತ್ವದ ತಾಪಿ ಪ್ರಾಜೆಕ್ಟ್‌ ಸೇರಿದಂತೆ ಹಲವು ಮಹತ್ವದ ಎಕನಾಮಿಕ್‌ ಪ್ರಾಜೆಕ್ಟ್‌ಗಳನ್ನ ತನ್ನ ನಿಯಂತ್ರಣಕ್ಕೆ ತಗೋಳೋದಕ್ಕೆ ನೋಡ್ತಿದ್ದಾನೆ ಎನ್ನಲಾಗಲಿದೆ. TAPI ಅಂದ್ರೆ ತುರ್ಕೆಮಿನಿಸ್ತಾನ್‌-ಅಫ್ಘಾನಿಸ್ತಾನ್‌-ಪಾಕಿಸ್ತಾನ್‌ ಹಾಗು ಭಾರತದ ಮೂಲಕ ಹೋಗುವ ಗ್ಯಾಸ್‌ ಪೈಪ್‌ಲೈನ್‌. ಈ ಪೈಪ್‌ಲೈನ್‌ ಮೂಲಕ ತುರ್ಕೆಮಿನಿಸ್ತಾನದ ಗ್ಯಾಲ್ಕನಿಷ್‌ ಗ್ಯಾಸ್‌ ಫೀಲ್ಡ್‌ನಿಂದ ಭಾರತ ಹಾಗು ಪಾಕಿಸ್ತಾನಕ್ಕೆ ನ್ಯಾಚುರಲ್‌ ಗ್ಯಾಸ್‌ನ್ನ ಪೂರೈಕೆ ಮಾಡಲಾಗುತ್ತೆ. ಸೋ ಈಗ ತಾಪಿ ಪ್ರಾಜೆಕ್ಟ್‌ನ ಅಡಿ ಅಫ್ಘಾನಿಸ್ತಾನದಲ್ಲಿ ನಡೆಯುವ ಕನ್ಸಟ್ರಕ್ಷನ್ಸ್‌ ಸೇರಿದಂತೆ ಕೆಲ ಪ್ರಾಜೆಕ್ಟ್‌ಗಳನ್ನ ಹಕ್ಕಾನಿ ತನ್ನ ನಿಯಂತ್ರಣಕ್ಕೆ ತಗೊಳೋಕೆ ನೋಡ್ತಿದಾನೆ ಅಂತ UN ವರದಿ ತಿಳಿಸಿದೆ. ಅಂದ್ಹಾಗೆ ತಾಲಿಬಾನ್‌ ಸರ್ಕಾರದಲ್ಲಿ ಎರಡು ಬಣಗಳಿವೆ. ಒಂದು ತಾಲಿಬಾನ್‌ ಮುಖ್ಯಸ್ಥ ಹಿಬತುಲ್ಲಾ ಅಖುಂಜಾದ ಬಣ. ಈ ಅಖುಂಜಾದ ಕಂದಹಾರನಲ್ಲಿ ಪ್ರತ್ಯೇಕವಾಗಿ ಇದಾರೆ ಎನ್ನಲಾಗುತ್ತೆ. ಇನ್ನೊಂದು ಈ ಸಿರಾಜುದ್ದಿನ್‌ ಹಕ್ಕಾನಿ ಬಣ… ಮೂಲತಃ ಈತ ತಾಲಿಬಾನಿ ಅಲ್ಲ, ಈತ ಕುಖ್ಯಾತ ಸುನ್ನಿ ಉಗ್ರ ಸಂಘಟನೆ ಹಕ್ಕಾನಿ ನೆಟ್‌ವರ್ಕ್‌ನ ಮುಖ್ಯಸ್ಥ. ಆದ್ರೆ ಒಟ್ಟಾಗಿ ಸರ್ಕಾರ ನಡೆಸ್ತಿದ್ರು. ಆದ್ರೆ ಈಗ ಈ ಎರಡೂ ಬಣಗಳ ನಡುವೆ ಗಲಾಟೆ ಜಾಸ್ತಿಯಾಗ್ತಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply