masthmagaa.com:

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಮತ್ತು ಕೊನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾವನ್ನ ಆಸ್ಟ್ರೇಲಿಯಾ 12 ರನ್​ಗಳಿಂದ ಸೋಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಭಾರತಕ್ಕೆ 187 ರನ್ ಟಾರ್ಗೆಟ್ ನೀಡ್ತು. ಆದ್ರೆ ಭಾರತ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 174 ರನ್ ಗಳಿಸಲಷ್ಟೇ ಶಕ್ತವಾಯ್ತು. ಭಾರತದ ಪರ ಕ್ಯಾಪ್ಟನ್ ಕೊಹ್ಲಿ 85 ರನ್ ಸಿಡಿಸಿದ್ರು. ಮ್ಯಾಚ್ ಸೋತ್ರೂ ಮೊದಲೆರಡು ಪಂದ್ಯಗಳನ್ನ ಗೆದ್ದಿದ್ದ ಟೀಂ ಇಂಡಿಯಾ ಸರಣಿಯನ್ನ ಕೈವಶ ಮಾಡಿಕೊಂಡಿದೆ. ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ್ರು. ಆದ್ರೆ ತಮಗೆ ಬಂದ ಮ್ಯಾನ್ ಆಫ್ ಸಿರೀಸ್ ಪ್ರಶಸ್ತಿಯನ್ನ ಸಹ ಆಟಗಾರ ಟಿ. ನಟರಾಜನ್​​ಗೆ ಕೊಟ್ಟಿದ್ದಾರೆ ಹಾರ್ದಿಕ್ ಪಾಂಡ್ಯ. ಅಂದ್ಹಾಗೆ ವೇಗಿ ನಟರಾಜನ್ ಆಸ್ಟ್ರೇಲಿಯಾ ಸರಣಿಗೆ ಹೆಚ್ಚುವರಿ ಬೌಲರ್ ಆಗಿ ಆಯ್ಕೆಯಾಗಿದ್ದರು. ಅಲ್ಲದೆ ಇದು ಅವರ ಪದಾರ್ಪಣೆ ಸರಣಿ ಕೂಡ ಆಗಿದೆ.  ಪದಾರ್ಪಣೆ ಸರಣಿಯಲ್ಲೇ ನಟರಾಜನ್​ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ತಮ್ಮ ಮೇಲೆ ತಮಗೆ ನಂಬಿಕೆ ಇರಬೇಕು, ಆಗ ಏನು ಬೇಕಾದ್ರೂ ಸಾಧಿಸಬಹುದು ಅಂತ ಹೇಳಿದ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನ ನಟರಾಜನ್​ಗೆ ಕೊಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯರ ಈ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಡಿಸೆಂಬರ್ 17ರಂದು ಅಡಿಲೇಡ್​ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.

-masthmagaa.com

Contact Us for Advertisement

Leave a Reply