ಪ್ರಧಾನಿ ಮೋದಿಯವರಿಗೆ ಆತಿಥ್ಯ ನೀಡಲು ಕಾಯುತ್ತಿದ್ದೇವೆ: ಅಮೆರಿಕ

masthmagaa.com:

ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸರ್ಕಾರಕ್ಕೆ ಆತಿಥ್ಯ ನೀಡಲು ನಾವು ಎದುರು ನೋಡ್ತಿದ್ದೀವಿ ಅಂತ ಅಮೆರಿಕ ಹೇಳಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮೋದಿಯವರನ್ನ ಅಮೆರಿಕಕ್ಕೆ ಆಹ್ವಾನಿಸಿದ್ದಾರೆ ಅಂತ ನಿನ್ನೆ ಅಧಿಕೃತವಾಗಿ ವೈಟ್‌ಹೌಸ್ ಅನೌನ್ಸ್‌ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಾವು ಭಾರತದ ಜೊತೆಗೆ ಪ್ರಮುಖ ಪಾರ್ಟನರ್‌ಶಿಪ್‌ ಹೊಂದಿದ್ದೇವೆ. ಅದನ್ನ ಇನ್ನಷ್ಟು ಗಟ್ಟಿಗೊಳಿಸುವ ಕ್ರಮಗಳನ್ನ ಕೈಗೊಳ್ಳಲು ನಾವು ರೆಡಿ ಇದ್ದೀವಿ. ಮೋದಿಯವರ ಈ ಭೇಟಿಯಿಂದಾಗಿ ಹಲವಾರು ವಿಷಯಗಳ ಬಗ್ಗೆ ಮಾತನಾಡಲು ಉತ್ತಮ ಅವಕಾಶ ಸಿಗಲಿದೆ ಅಂತ ಅಮೆರಿಕ ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ. ಅಂದ್ಹಾಗೆ ಜೂನ್‌ 22ರಂದು ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಅಧಿಕೃತವಾಗಿ ಭೇಟಿ ನೀಡಲಿದ್ದು, ಬೈಡೆನ್‌ ದಂಪತಿ ಆಯೋಜಿಸಲಿರುವ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.

-masthmagaa.com

Contact Us for Advertisement

Leave a Reply