ಹಿಂದಿ, ಬೇರೆ ಯಾವ ಭಾಷೆ ಜೊತೆಯಲ್ಲೂ ಸ್ಪರ್ಧೆ ಮಾಡಲ್ಲ: ಅಮಿತ್‌ ಶಾ

masthmagaa.com:

ಹಿಂದಿ ಭಾಷೆ ದೇಶದ ಇತರ ಭಾಷೆಗಳ ವೈವಿಧ್ಯತೆಯನ್ನ ಒಗ್ಗೂಡಿಸುತ್ತದೆ ಅಂತ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಹೇಳಿದ್ದಾರೆ. ಇಂದು ʻಹಿಂದೆ ದಿವಸ್‌ʼ ಹಿನ್ನಲೆಯಲ್ಲಿ ಮಾತಾಅಡಿರುವ ಅಮಿತ್‌ ಶಾ, ಹಿಂದಿ ಯಾವತ್ತೂ ಯಾವುದೇ ಭಾರತೀಯ ಭಾಷೆಯ ಜೊತೆ ಸ್ಪರ್ಧೆಗೆ ಇಳಿದಿಲ್ಲ ಮತ್ತು ಮುಂದೆಯೂ ಸ್ಪರ್ಧೆಗಿಳಿಯಲ್ಲ. ಎಲ್ಲಾ ಭಾಷೆಗಳನ್ನ ಬಲಪಡಿಸೋ ಮೂಲಕ ಮಾತ್ರ ಬಲಿಷ್ಠ ದೇಶ ಹೊರಹೊಮ್ಮಲಿದೆ ಅಂತ ಹೇಳಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿಯವರು ಹಿಂದಿ ದಿವಸದ ಅಂಗವಾಗಿ ವಿಶ್‌ ಮಾಡಿದ್ದಾರೆ. ದೇಶದ ಏಕತೆ ಹಾಗೂ ಸೌಹಾರ್ದತೆಯನ್ನ ಇನ್ನಷ್ಟು ಬಲಪಡಿಸೋದನ್ನ ಹಿಂದೆ ಭಾಷೆ ಮುಂದುವರೆಸಲಿ ಎಂದು ನಾನು ಬಯಸುತ್ತೇನೆ ಅಂತ ಮೋದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply