ಕೆನಡಾದ ಲಖ್ಬೀರ್ ಸಿಂಗ್‌ ʼಭಯೋತ್ಪಾದಕʼ: ಭಾರತೀಯ ಗೃಹ ಇಲಾಖೆ!

masthmagaa.com:

2021ರ ಪಂಜಾಬ್‌ ಪೋಲಿಸ್‌ ಇಂಟಲಿಜೆನ್ಸಿ ಕೇಂದ್ರ ಕಚೇರಿ ದಾಳಿಯಲ್ಲಿ ಭಾಗಿಯಾಗಿದ್ದ ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ ಲಖ್ಬೀರ್ ಸಿಂಗ್‌ ಲಂಡಾನನ್ನ ʻಭಯೋತ್ಪಾದಕʼರ ಲಿಸ್ಟ್‌ಗೆ ಗೃಹ ಇಲಾಖೆ ಸೇರಿಸಿದೆ. ಈ ಹಿಂದೆ 2022 ಡಿಸೆಂಬರ್‌ನಲ್ಲಿ ಪಂಜಾಬ್‌ನ ಸಾರಹದ ಪೊಲೀಸ್‌ ಠಾಣೆ ಮೇಲೆ ಉಗ್ರರ Rocket-Propelled Grenade (RPG)ದಾಳಿ ನಡೆದಿತ್ತು. ಅದ್ರಲ್ಲಿ ಲಂಡಾ ಕೂಡ ಭಾಗಿಯಾಗಿದ್ದರ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಲಂಡಾ ಬಬ್ಬರ್‌ ಖಾಲ್ಸಾ ಅನ್ನೋ ಖಲಿಸ್ತಾನಿ ಉಗ್ರ ಸಂಘಟನೆಯಲ್ಲಿ ಇದ್ದ ಆಂತ ಹೇಳಲಾಗ್ತಿತ್ತು. ಕಳೆದ ಸಪ್ಟೆಂಬರ್‌ನಲ್ಲಿ ಪಂಜಾಬ್‌ನ ಪೊಲೀಸ್ ಕಾರ್ಯಾಚರಣೆ ವೇಳೆ ಲಂಡಾ ವ್ಯಾಪ್ಯಾರಿ ಒಬ್ಬರಿಗೆ ಕರೆ ಮಾಡಿ 15 ಲಕ್ಷ ಹಣ ಕೇಳಿದ್ದರ ಬಗ್ಗೆ ಮಾಹಿತಿ ದೊರಕಿತ್ತು. ಈತ ಮೂಲತಃ ಭಾರತದವನಾಗಿದ್ರೂ ಸುಮಾರು ವರ್ಷಗಳಿಂದ ಕೆನಡಾದಲ್ಲೇ ನೆಲೆಸಿದ್ದಾನೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply