ಹಾಸ್ಟೆಲ್, ಪಿಜಿಯಲ್ಲೇ ಉಳಿದರೆ ಹುಷಾರ್ ಎಂದ ಬಿಬಿಎಂಪಿ!

masthmagaa.com:

ಹಾಸ್ಟೆಲ್‌ ಹಾಗೂ ಪಿಜಿ ಮಾಲೀಕರಿಗೆ, ವಿದ್ಯಾರ್ಥಿಗಳಿಗೆ ಬಿಬಿಎಂಪಿ ಖಡಕ್‌ ಎಚ್ಚರಿಕೆ ಕೊಟ್ಟಿದೆ. ಕಾಲೇಜುಗಳಿಗೆ ರಜೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಪಿಜಿಯಲ್ಲಿ ಇರಲು ಅವಕಾಶ ಇಲ್ಲಾ. ಒಂದ್ವೇಳೆ ಅನಿವಾರ್ಯ ಕಾರಣಗಳಿಗಿಂದಾಗಿ ವಿದ್ಯಾರ್ಥಿಗಳನ್ನು ಪಿಜಿಯಲ್ಲಿ ಇದ್ರೆ, ಪಿಜಿಯಲ್ಲಿ ವೈಯಕ್ತಿಕ ಆರೋಗ್ಯ ಮತ್ತು ಸ್ವಚ್ಛತೆಯ ಜವಾಬ್ದಾರಿ ಅವರದ್ದೇ ಆಗಿರುತ್ತದೆ. 110 ಚದರ ಅಡಿಯ ಕೊಠಡಿಯಲ್ಲಿ ಇಬ್ಬರಿಗಿಂತ ಹೆಚ್ಚು ಜನರಿಗೆ ಅವಕಾಶವಿಲ್ಲ. ಪಿಜಿಯ ಸ್ವಚ್ಛತೆಯ ಹೊಣೆಯನ್ನು ಪಿಜಿ ಮಾಲೀಕರೇ ಹೊರಬೇಕು. ಪಿಜಿಯಲ್ಲಿ ಇರುವವರನ್ನು ಯಾವುದೇ ಮುನ್ಸೂಚನೆ ಕೊಡದೆ, ದಿಢೀರ್ ಅಂತ ಹೊರ ಹಾಕುವಂತಿಲ್ಲ. ಪಿಜಿ ಮಾಲೀಕರ ನಿರ್ಲಕ್ಷ್ಯದಿಂದ ಕೋವಿಡ್ ಹರಡುವಿಕೆ ಕಂಡಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply