ನನ್ನ ಬಳಿ ಪೆನ್‌ಡ್ರೈವ್‌ ಇದೆ: ಕಾಂಗ್ರೆಸ್‌ ವಿರುದ್ಧ ಹೊಸ ಬಾಂಬ್ ಸಿಡಿಸಿದ HDK

masthmagaa.com:

ತಮ್ಮ ವಿರುದ್ಧ ಅಕ್ರಮ ಹಣ ಗಳಿಕೆಯ ಆರೋಪ ಮಾಡಿರುವ ಕಾಂಗ್ರೆಸ್‌ ವಿರುದ್ಧ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮತ್ತೊಮ್ಮೆ ಸಿಡಿದೆದಿದ್ದಾರೆ. ನನ್ನ ಬಳಿ ಪೆನ್‌ಡ್ರೈವ್‌ ಇದೆ. ನನ್ನನ್ನ ಕೆಣಕಿದ್ರೆ ದಾಖಲೆಗಳ ಸಮೇತ ಆರೋಪ ಮಾಡ್ತೀನಿ ಅಂತ ಹೇಳಿದ್ದಾರೆ. ಕಳೆದ 2-3 ದಿನಗಳಿಂದ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ, ಸಿಎಂ ಕಚೇರಿಯ ವಿರುದ್ಧ ಲಂಚದ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ ಟಾಂಗ್ ನೀಡಿ, ಕುಮಾರಸ್ವಾಮಿ ದಾಖಲೆ ತೋರಿಸಲಿ. ದಾಖಲೆ ಸಮೇತ ಆರೋಪ ಮಾಡಿದರೆ ತನಿಖೆ ಮಾಡುತ್ತೇವೆ ಎಂದಿತ್ತು. ಇದರ ಜೊತೆಗೆ ಕುಮಾರಸ್ವಾಮಿಯವರು ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಕೆಲ ವರ್ಷಗಳಿಂದ ವಾಸ್ತವ್ಯ ಹೂಡಿದ್ದಾರೆ. ಅದಕ್ಕೆ ಬಾಡಿಗೆ ಎಷ್ಟು, ಎಲ್ಲಿಂದ ದುಡ್ಡು ತಂದು ಆ ಬಾಡಿಗೆ ಪಾವತಿಸುತ್ತಿದ್ದೀರಿ ಅಂತೆಲ್ಲ ಪ್ರಶ್ನೆ ಕೇಳಿ ಕುಮಾರಸ್ವಾಮಿಯವರನ್ನು ಕೆಣಕಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ್ನ ತರಾಟೆಗೆ ತೆಗೆದುಕೊಂಡಿರುವ ಕುಮಾರಸ್ವಾಮಿ, ಕಾಂಗ್ರೆಸ್ ವಿರುದ್ಧ ಸೆಡ್ಡು ಹೊಡೆದಿದ್ದಾರೆ. ನನ್ನ ಬಳಿ ಪೆನ್ ಡ್ರೈವ್ ಇದೆ. ಅದರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಆರಂಭವಾಗಿರುವ ವರ್ಗಾವಣೆ ದಂಧೆಯ ಎಲ್ಲಾ ಮಾತುಕತೆಗಳಿವೆ. ಆ ಆಡಿಯೋ ಕ್ಲಿಪ್‌ಗಳನ್ನು ಬಿಡುಗಡೆ ಮಾಡ್ತೇನೆ ಅಂತ ಬೆದರಿಕೆ ಹಾಕಿದ್ದಾರೆ.

 

-masthmagaa.com

 

 

Contact Us for Advertisement

Leave a Reply