I.N.D.I.A ಮೈತ್ರಿ ಕೂಟದಲ್ಲಿ ಬಿರುಗಾಳಿ, ಪೂರ್ವ ಪಶ್ಚಿಮದಿಂದ ಹೊಡೆತ

masthmagaa.com

I.N.D.I.A ಮೈತ್ರಿ ಕೂಟದ ಅಡಿಪಾಯದಲ್ಲಿ ಈ ಮೊದಲೇ ಬಹಳಷ್ಟು ಬಿರುಕುಗಳು ಕಾಣಿಸಿಕೊಂಡಿದ್ವು. ಇದೀಗ ಈ ಬಿರುಕುಗಳು ಇನ್ನಷ್ಟು ಸಡಿಲ ಆಗಿ, ಒಕ್ಕೂಟದ ಬುಡವೇ ಅಲುಗಾಡಿದೆ. TMC ಮುಖ್ಯಸ್ಥೆ ಹಾಗೂ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ನಾವು ಲೋಕಸಭೆ ಚುನಾವಣೆಯನ್ನ ಏಕಾಂಗಿಯಾಗಿ ಎದುರಿಸ್ತೀವಿ ಅಂದಿದ್ದಾರೆ. ನಾವು ಕಾಂಗ್ರೆಸ್‌ನವ್ರಿಗೆ ಏನೆಲ್ಲಾ ಆಪ್ಶನ್‌ ಕೊಟ್ರೂ, ಏನೇ ಪ್ರಪೋಸಲ್ ಇಟ್ರೂ, ಅವ್ರು ಎಲ್ಲವನ್ನು ಬದಿಗೆ ತಳ್ಳಿದ್ದಾರೆ. ಆದ್ರಿಂದ ನಮ್‌ ಪಾಡಿಗ್ ನಾವು ಏಕಾಂಗಿಯಾಗಿ‌ ಸ್ಪರ್ಧೆ ಮಾಡ್ತೀವಿ ಅಂದಿದ್ದಾರೆ. ಮಂಗಳವಾರ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಮಮತಾರನ್ನ ಅವಕಾಶವಾದಿ ಅಂದಿದ್ರು. ಅಲ್ಲದೆ ಅವ್ರ ಸಹಾಯ ಇಲ್ದೇ ನಾವು ಚುನಾವಣೆಗೆ ಹೋಗ್ತೀವಿ. ಅವ್ರು ಸರ್ಕಾರ ರಚಿಸಿರೋದೆ ಕಾಂಗ್ರೆಸ್‌ ಸಹಾಯದಿಂದ ಅಂದಿದ್ರು. ಇದ್ರ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಈ ನಿರ್ಧಾರ ಮಾಡಿದ್ದಾರೆ. ಇತ್ತ ಕಾಂಗ್ರೆಸ್‌ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದೆ. ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌, TMC I.N.D.I.A ಮೈತ್ರಿ ಕೂಟದ ಆಧಾರ ಸ್ತಂಭ ಇದ್ದಂಗೆ. ಮಮತಾಜೀ ಅವ್ರು ಇಲ್ದೇ ಈ ಒಕ್ಕೂಟವನ್ನೇ ಇಮ್ಯಾಜಿನ್‌ ಮಾಡ್ಕೋಳ್ಳೋಕಾಗಲ್ಲ. ನಾಳೆ ನಮ್ಮ ಯಾತ್ರೆ ವೆಸ್ಟ್‌ ಬೆಂಗಾಲ್‌ಗೆ ಬರುತ್ತೆ. ಈ ಬಗ್ಗೆ ಮಾತಾಡಿ ಒಂದು ನಿರ್ಧಾರಕ್ಕೆ ಬರ್ತೀವಿ ಅಂದಿದ್ದಾರೆ. ಇನ್ನು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ ಕೆಲವೇ ನಿಮಿಷಗಳಲ್ಲಿ ಅತ್ತ ಪಂಜಾಬ್‌ನ ಆಪ್‌ ಸರ್ಕಾರ ಕೂಡ ಉಲ್ಟಾ ಹೊಡೆದಿದೆ. ಪಂಜಾಬ್‌ನಲ್ಲಿ ಆಪ್‌ ಕಾಂಗ್ರೆಸ್‌ ಜೊತೆ ಮೈತ್ರಿಯಲ್ಲಿ ಇಲ್ಲ ಅಂತ ಅಲ್ಲಿನ ಸಿಎಂ ಭಗವಂತ್‌ ಮಾನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply