ಏಕದಿನ ವಿಶ್ವಕಪ್‌ ಟೂರ್ನಿ: ಅಕ್ಟೋಬರ್‌ 15 ರಂದು ಭಾರತ-ಪಾಕಿಸ್ತಾನ ಪಂದ್ಯ ನಡೆಯೋದು ಡೌಟ್‌! ಯಾಕೆ?

masthmagaa.com:

ಭಾರತದಲ್ಲಿ ನಡೆಯಲಿರುವ 2023ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಈಗಾಗಲೇ ರಿಲೀಸ್‌ ಆಗಿದೆ. ಕ್ರಿಕೆಟ್‌ ಪ್ರೇಮಿಗಳ ಕಣ್ಣೆಲ್ಲಾ ಅಕ್ಟೋಬರ್‌ 15ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ಭಾರತ-ಪಾಕ್‌ ಹೈ-ವೋಲ್ಟೇಜ್ ಪಂದ್ಯದ ಮೇಲಿದೆ. ಆದ್ರೆ ಭದ್ರತೆ ದೃಷಿಯಿಂದ ಈ ಪಂದ್ಯದ ದಿನಾಂಕವನ್ನ ಬದಲಾಯಿಸೋಕೆ BCCI ಮುಂದಾಗಿದೆ ಅಂತ ತಿಳಿದು ಬಂದಿದೆ. ನವರಾತ್ರಿ ಹಬ್ಬದ ಮೊದಲ ದಿನವೇ ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್‌ ಪಂದ್ಯ ನಡೆಯಲಿದ್ದು, ಅತಿದೊಡ್ಡ ಹಬ್ಬ ಆಗಿರೋ ಕಾರಣ ಪಂದ್ಯದ ಆಯೋಜನೆಗೆ ಭದ್ರತೆ ಕೊರತೆ ಎದುರಾಗಬಹುದು. ಹೀಗಾಗಿ ICC ಹಾಗೂ BCCI ವೇಳಾಪಟ್ಟಿಯಲ್ಲಿ ಬದಲಾವಣೆಗೆ ಮುಂದಾಗಿವೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply