ಕಂಟೈನ್ಮೆಂಟ್ ಝೋನ್​ನಲ್ಲಿ ಇರುವವರೆಲ್ಲರಿಗೂ ಕೊರೋನಾ ಪರೀಕ್ಷೆ..!

masthmagaa.com:

ದೆಹಲಿ: ಕಂಟೈನ್ಮೆಂಟ್ ಝೋನ್​​ಗಳಲ್ಲಿ ಅದ್ರಲ್ಲೂ ಕೊರೋನಾ ಪ್ರಭಾವ ಹೆಚ್ಚಾಗಿರುವ ಪ್ರದೇಶಗಳಲ್ಲಿ ವಾಸಿಸುವ ಎಲ್ಲರಿಗೂ ಕಡ್ಡಾಯವಾಗಿ ಕೊರೋನಾ ರ‍್ಯಾಪಿಡ್ ಟೆಸ್ಟ್ ನಡೆಸಬೇಕು ಅಂತ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜೊತೆಗೆ ವಿದೇಶಗಳಿಗೆ ತೆರಳುವವರಿಗೆ ಮತ್ತು ರಾಜ್ಯಗಳ ನಡುವೆ ಪ್ರಯಾಣಿಸುವವರಿಗೆ ಬೇಡಿಕೆ ಮೇರೆಗೆ ಕೊರೋನಾ ಪರೀಕ್ಷೆ ನಡೆಸಬೇಕು.. ಅಂತಾರಾಜ್ಯ ಪ್ರಯಾಣದ ವೇಳೆ ಕೊರೋನಾ ಪರೀಕ್ಷೆಯ ನೆಗೆಟಿವ್ ರಿಪೋರ್ಟ್​​​ ಹೊಂದುವುದನ್ನು ರಾಜ್ಯಗಳು ಕಡ್ಡಾಯಗೊಳಿಸಬೇಕು ಅಂತ ಸಲಹೆ ನೀಡಿದೆ. ಅಲ್ಲದೆ ಯಾರಿಗಾದ್ರೂ ಕೊರೋನಾ ರ‍್ಯಾಪಿಡ್ ಎಂಟಿಜನ್ ಟೆಸ್ಟ್​ನಲ್ಲಿ ನೆಗೆಟಿವ್ ಬಂದು ನಂತರದಲ್ಲಿ ಲಕ್ಷಣಗಳು ಕಂಡು ಬಂದರೆ ಅಂಥವರಿಗೆ RT-PCR ಪರೀಕ್ಷೆ ನಡೆಸಬೇಕು ಅಂತ ಕೂಡ ತಿಳಿಸಿದೆ. ಪರೀಕ್ಷೆಯ ಕೊರತೆಯಿಂದಾಗಿ ಗರ್ಭಿಣಿಯರಿಗೆ ತೊಂದರೆಯಾಗಬಾರದು.. ಡೆಲಿವರಿ ವೇಳೆ ಬೇರೆ ಆಸ್ಪತ್ರೆಗೆ ರೆಫರ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಅಂತ ಸೂಚಿಸಿದೆ.

-masthmagaa.com:

Contact Us for Advertisement

Leave a Reply