ಇಸ್ರೇಲ್‌ ಯುದ್ಧ ತೀವ್ರ! ಅಮೆರಿಕ ವಿರುದ್ಧ ಒಗ್ಗಟ್ಟಾದ ಉಗ್ರರು!

masthmagaa.com:

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಕ್ಷಣ ಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದ್ದು, ಯುದ್ಧದಲ್ಲಿ 169 ಇಸ್ರೇಲ್‌ ಸೈನಿಕರು ಮೃತಪಟ್ಟಿದ್ದಾರೆ ಅಂತ ಇಸ್ರೇಲ್‌ ಅಧಿಕೃತವಾಗಿ ಹೇಳಿದೆ. ಇನ್ನುಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿ ಮಾಡ್ತಿರೊದನ್ನೇ ಅಡ್ವಾಂಟೇಜ್‌ ಆಗಿ ತೆಗೆದುಕೊಳ್ತಿರೋ ಇಸ್ರೇಲ್‌ನ ಶತ್ರು ರಾಷ್ಟ್ರಗಳು ಇಸ್ರೇಲ್‌ ಮೇಲೆ ದಾಳಿ ನಡೆಸುತ್ತಿವೆ. ಈಗಾಗಲೇ ಲೆಬನಾನ್‌ನಲ್ಲಿರುವ ಹೆಜ್ಬೊಲ್ಲ ಉಗ್ರ ಸಂಘಟನೆ ಮತ್ತು ಸಿರಿಯಾದ ಕೆಲವು ಭಾಗಗಳಿಂದ ಇಸ್ರೇಲ್‌ ಮೇಲೆ ದಾಳಿ ನಡೆಸುತ್ತಿವೆ. ಇನ್ನು ಭಾರತ, ಬ್ರಿಟನ್‌, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಹಮಾಸ್‌ನ್ನ ಖಂಡಿಸಿದ್ದು, ಇಸ್ರೇಲ್‌ಗೆ ತಮ್ಮ ಬೆಂಬಲ ಸೂಚಿಸಿವೆ. ಅದ್ರಲ್ಲೂ ಅಮೆರಿಕ ಮಿಲಿಟರಿ ನೆರವು ಘೋಷಿಸಿದ್ದು, ಒಂದು ಬ್ಯಾಚ್‌ನ ಶಸ್ತ್ರಾಸ್ತ್ರಗಳನ್ನ ರವಾನಿಸಿದೆ. ಈ ಹಿನ್ನಲೆಯಲ್ಲಿ ಇರಾಕ್‌, ಯೆಮೆನ್‌ ಮತ್ತು ಇರಾನ್‌ ಮೂಲದ ಉಗ್ರ ಸಂಘಟನೆಗಳು ಅಮೆರಿಕಾಗೆ ವಾರ್ನ್‌ ಮಾಡಿವೆ. ಇಸ್ರೇಲ್-‌ ಹಮಾಸ್‌ ಸಂಘರ್ಷದಲ್ಲಿ ಅಮೆರಿಕ ಏನಾದ್ರು ಮಧ್ಯಪ್ರವೇಶ ಮಾಡಿದ್ರೆ ಇರಾಕ್‌ನಲ್ಲಿರುವ ಅಮೆರಿಕದ ಪ್ರಾಪರ್ಟಿಗಳ ಮೇಲೆ ಮಿಸೈಲ್‌ ಹಾಗೂ ರಾಕೆಟ್‌ ದಾಳಿ ನಡೆಸಬೇಕಾಗುತ್ತೆ ಅಂತ ಇರಾಕ್‌ನ ಕಟೈಬ್‌ ಹೆಜ್ಬೊಲ್ಲ ಎಚ್ಚರಿಕೆ ನೀಡಿದೆ. ಇತ್ತ ಹಮಾಸ್‌ ಉಗ್ರರ ದಾಳಿಗೆ ಪ್ರತಿಯಾಗಿ ಗಾಜಾ ಪಟ್ಟಿಗೆ ಸಪ್ಲೈ ಆಗ್ತಿದ್ದ ಆಹಾರ, ಇಂಧನ ಹಾಗೂ ಔಷಧ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನ ಇಸ್ರೇಲ್‌ ಕಟ್‌ ಮಾಡಿದೆ. ಈ ಹಿನ್ನಲೆಯಲ್ಲಿ ಗಾಜಾದ ಪವರ್‌ ಪ್ಲಾಂಟ್‌ನಲ್ಲಿ ಕೇವಲ 3 ಲಕ್ಷ ಲೀಟರ್‌ ಡೀಸೆಲ್‌ ಉಳಿದುಕೊಂಡಿದೆ. ಇದು 10 ರಿಂದ 12 ಗಂಟೆಗಳ ನಿರ್ವಹಣೆ ಮಾಡಲು ಮಾತ್ರ ಸಾಕಾಗುತ್ತೆ ಅಂತ ಪ್ಯಾಲಸ್ತೈನ್‌ ಇಂಧನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಮತ್ತೊಂದ್‌ ಕಡೆ ʻಹಮಾಸ್‌ ಉಗ್ರರನ್ನ ನಾಶ ಮಾಡ್ತೀವಿ ಅಂತ ನೆತನ್ಯಾಹು ಹೇಳ್ತಾರೆ. ಆದ್ರೆ ಅದು ಸಾಧ್ಯವಾಗೋ ಮಾತಲ್ಲ ಅಂತ ಇಸ್ರೇಲ್‌ನ ಮಾಜಿ ಪ್ರಧಾನಿ ಯೂದ್‌ ಒಲ್ಮೆರ್ಟ್‌ ಭಾರತೀಯ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಇನ್ನೊಂದ್‌ ಕಡೆ AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರು ಪ್ಯಾಲಸ್ತೈನ್‌ ಬೆಂಬಲಿಸಿ ಮತ್ತೊಮ್ಮೆ Xನಲ್ಲಿ ಪೋಸ್ಟ್‌ ಹಾಕಿದ್ದಾರೆ. ಪ್ಯಾಲಸ್ತೈನ್‌ ಜಿಂದಾಬಾದ್‌ ಹಾಗೂ ಗಾಜಾದಲ್ಲಿ ಹಿಂಸಾಚಾರ ನಡೆಸುತ್ತಿರುವ ಇಸ್ರೇಲ್‌ ಅಥ್ವಾ ಯಾವುದೇ ಗುಂಪನ್ನ ಖಂಡಿಸುತ್ತೇನೆ ಅಂತ ಓವೈಸಿ ಬರೆದುಕೊಂಡಿದ್ದಾರೆ. ಅಂದ್ಹಾಗೆ ಮೊನ್ನೆಯೂ ಪ್ಯಾಲಸ್ತೈನ್‌ನ್ನ ಬೆಂಬಲಿಸಿ ಪೋಸ್ಟ್‌ ಹಾಕಿದ್ದ ಓವೈಸಿ, ಐತಿಹಾಸಿಕವಾಗಿ ಭಾರತ ಪ್ಯಾಲಸ್ತೈನ್‌ನೊಂದಿಗೆ ನಿಂತಿದೆ ಅಂತ ಹೇಳಿದ್ರು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ವಿದೇಶಾಂಗ ಸಚಿವರಾಗಿದ್ದಾಗ ನಾವು ಪ್ಯಾಲಸ್ತೈನ್‌ ಪರ ನಿಲ್ಲುತ್ತೇವೆ ಅಂತ ಹೇಳಿದ್ದರು. ಜೊತೆಗೆ ಪ್ಯಾಲಸ್ತೈನ್‌ಗೆ ನಮ್ಮ ಬೆಂಬಲ ಸೂಚಿಸಲು ಪೋಸ್ಟ್‌ ಸ್ಟ್ಯಾಂಪ್‌ನ್ನ ಕೂಡ ರಿಲೀಸ್‌ ಮಾಡಿದ್ರು ಅಂತ ಉಲ್ಲೇಖಿಸಿದ್ದಾರೆ. ಇನ್ನು ಮಿಡಲ್‌ ಈಸ್ಟ್‌ನಲ್ಲಿ ಶಾಂತಿ ಸ್ಥಾಪನೆಗಾಗಿ ಇಸ್ರೇಲ್‌ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ಯಾಲಸ್ತೈನ್‌ ಲ್ಯಾಂಡ್‌ನ್ನ ತೆರವುಗೊಳಿಸಬೇಕು ಅಂತ ವಾಜಪೇಯಿ ಅವರು ಹೇಳಿದ್ದು ಈಗ ವೈರಲ್‌ ಆಗಿದೆ. ಮತ್ತೊಂದ್‌ ಕಡೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಕೂಡ ಪ್ಯಾಲಸ್ತೈನ್‌ಗೆ ಬೆಂಬಲಿಸಿದ್ದು, ಭಾರತ ಕೂಡ ಪ್ಯಾಲಸ್ತೈನ್‌ ಪರವಾಗಿ ನಿಲ್ಲಬೇಕು ಅಂತ ಹೇಳಿದ್ದಾರೆ. ಜೊತೆಗೆ ಹಮಾಸ್‌ ಉಗ್ರ ಸಂಘಟನೆ ಪ್ಯಾಲಸ್ತೈನ್‌ನ್ನ ಪ್ರತಿನಿಧಿಸೋದಿಲ್ಲ. ಹೀಗಾಗಿ ಪ್ಯಾಲಸ್ತೈನ್‌ನಲ್ಲಿ ಈ ಯುದ್ಧದಿಂದ ಉಂಟಾಗೋ ಪರಿಣಾಮವನ್ನ ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಂಡು ಅವರಿಗೂ ಸಪೋರ್ಟ್‌ ಮಾಡಲೇಬೇಕು ಅಂತ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply