ಇಡೀ ಪ್ರಪಂಚದಲ್ಲಿ 2015ರಿಂದ ಗಡೀಪಾರಾದ ಪಾಕಿಗಳೆಷ್ಟು ಗೊತ್ತಾ?

masthmagaa.com:

ಪಾಕಿಸ್ತಾನ ಎಲ್ಲಿ ಹೋದ್ರೂ ನಾಚಿಕೆಗೆಡೋದೇ ಆಗಿದೆ. 2015ರಿಂದ ಈವರೆಗೆ 6,18,877 ಪಾಕಿಗಳನ್ನು ವಿಶ್ವದ ಒಟ್ಟು 138 ದೇಶಗಳಿಂದ ಗಡೀಪಾರು ಮಾಡಲಾಗಿದೆ. ಅಕ್ರಮವಾಗಿ ಪ್ರವೇಶ ಅಥವಾ ಪ್ರಯಾಣಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಹೊಂದಿದ್ದು ಇದಕ್ಕೆ ಕಾರಣ ಅಂತ ಗೊತ್ತಾಗಿದೆ. ಈ ಒಟ್ಟು ಸಂಖ್ಯೆಯಲ್ಲಿ 72 ಪರ್ಸೆಂಟ್​​ನಷ್ಟು ಪಾಕಿಗಳು ಫ್ರೆಂಡ್ಲಿ ದೇಶಗಳಾದ ಸೌದಿ ಅರೇಬಿಯಾ, ಒಮನ್, ಯುಎಇ, ಖತರ್​, ಬಹ್ರೇನ್​, ಇರಾನ್ ಮತ್ತು ಟರ್ಕಿ ದೇಶಗಳಿಂದಲೇ ಗಡೀಪಾರಾಗಿದ್ಧಾರೆ. ಅದ್ರಲ್ಲೂ 52 ಪರ್ಸೆಂಟ್​​ನಷ್ಟು ಅಂದ್ರೆ 3,21,590 ಜನ ಸೌದಿ ಅರೇಬಿಯಾ ಒಂದರಿಂದಲೇ ಗಡೀಪಾರಾಗಿದ್ದು, ಪ್ರತಿದಿನ 147 ಮಂದಿಯಂತೆ ಗಡೀಪಾರು ಮಾಡಲಾಗಿದೆ. 2015ರಲ್ಲಿ 61,403, 2016ರಲ್ಲಿ 57,704, 2017ರಲ್ಲಿ 93,736, 2018ರಲ್ಲಿ 50,944, 2019ರಲ್ಲಿ 38,470, 2020ರಲ್ಲಿ 19,333 ಮಂದಿ ಪಾಕಿಗಳನ್ನು ಸೌದಿಯಿಂದ ಗಡೀಪಾರು ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್​ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ, ಈ ರೀತಿ ಗಡೀಪಾರಾಗ್ತಿರೋರಿಗೆ ಆ ದೇಶಗಳಲ್ಲಿ ಪಾಕ್ ರಾಯಭಾರಿ ಕಚೇರಿಗಳಿಂದ ಸರಿಯಾದ ರೀತಿಯಲ್ಲಿ ಬೆಂಬಲ ಸಿಗ್ತಿಲ್ಲ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಗಡೀಪಾರಾಗ್ತಿರೋರ ಸಂಖ್ಯೆ ಜಾಸ್ತಿಯಾಗ್ತಿದೆ ಅಂತ ಹೇಳಿದೆ. ಈ ನಡುವೆ ಅಮೆರಿಕದ ಮಾನವ ಹಕ್ಕು ಸಂಸ್ಥೆ ಹ್ಯೂಮನ್ ರೈಟ್ಸ್​ ವಾಚ್​​, ಯುಎಇನಲ್ಲಿ ಪಾಕಿಸ್ತಾನದ ಶಿಯಾ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗ್ತಿದೆ ಅಂತ ತಿಳಿಸಿದೆ. ಅಷ್ಟೇ ಅಲ್ಲ.. ಕಳೆದ ಅಕ್ಟೋಬರ್​ನಿಂದ ಈವರೆಗೆ 4 ಮಂದಿ ಪಾಕಿಸ್ತಾನದ ಶಿಯಾ ಮುಸ್ಲಿಮರನ್ನು ಬೇಕು ಬೇಕಂತಲೇ ನಾಪತ್ತೆ ಮಾಡಿದ್ದು, 6 ಮಂದಿಯನ್ನು ವಾಪಸ್ ಕಳುಹಿಸಿದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply