ಪಾಕ್‌ಗೆ ಸದ್ಯ ಸಾಲ ನೀಡ್ಬೇಡಿ, ಎಲೆಕ್ಷನ್‌ ಲೆಕ್ಕ ಮುಗಿಲಿ: ಇಮ್ರಾನ್‌!

masthmagaa.com:

ಇಂಟರ್‌ನ್ಯಾಷನಲ್‌ ಮಾನಿಟರ್‌ ಫಂಡ್‌ ಮುಂದೆ ಮತ್ತೆ ಸಾಲ ಕೇಳೋಕೆ ಪಾಕ್‌ ಮುಂದಾಗಿರೋ ವಿಚಾರವಾಗಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ರಿಯಾಕ್ಟ್‌ ಮಾಡಿದ್ದಾರೆ. ʻಪಾಕ್‌ ಚುನಾವಣಾ ಪ್ರಕ್ರಿಯೆ ಮುಗೀಲಿ. ಅದಾದ ಬಳಿಕ ಪಾಕ್‌ಗೆ ಸಾಲ ನೀಡಿ…ಅಲ್ಲಿತನಕ ಹಣ ಕೊಡಬೇಡಿ ಅಂತ ಇಮ್ರಾನ್‌ ಖಾನ್‌ IMFಗೆ ಮನವಿ ಪತ್ರ ಬರೆದಿದ್ದಾರೆ. ಹೀಗಂತ PTI ಪಕ್ಷದ ವಕ್ತಾರ ಅಲಿ ಜಾಫರ್‌ ಮಾಹಿತಿ ನೀಡಿದ್ದಾರೆ. ʻಇಂತಹ ಕಠಿಣ ಪರಿಸ್ಥಿತಿಯಲ್ಲಿ ನೀವು ಪಾಕ್‌ಗೆ ಸಾಲ ವಿಸ್ತರಣೆ ಮಾಡಿದ್ರೆ ಅದನ್ನ ಮರು ಪಾವತಿ ಮಾಡೋರ್ಯಾರು? ಈಗಾಗ್ಲೇ ಪಾಕ್‌ ಸಾಲ ಹೆಚ್ಚಿದೆ. ಇನ್ನು ಈ ಸಾಲ ನೀಡಿದ್ರೆ ಇದು ಪಾಕ್‌ನಲ್ಲಿ ಮತ್ತಷ್ಟು ಬಡತನ ಹೆಚ್ಚಾಗೋಕೆ ಕಾರಣವಾಗುತ್ತೆʼ ಅಂತ ಇಮ್ರಾನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಅಂತ ಅವರ ಬೆಂಬಲಿಗರು ತಿಳಿಸಿದ್ದಾರೆ. ಅಂದ್ಹಾಗೆ IMF ಮುಂದೆ ಕನಿಷ್ಠ 6 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 50 ಸಾವಿರ ಕೋಟಿ ರೂಪಾಯಿ ಸಾಲ ಕೇಳೋಕೆ ಪಾಕ್‌ ಮುಂದಾಗಿದೆ. ಈ ಬಗ್ಗೆ ಮುಂಬರೋ ಮಾರ್ಚ್-ಏಪ್ರಿಲ್‌ನಲ್ಲಿ ಮಾತುಕತೆ ನಡೆಯೊ ಸಾಧ್ಯತೆ ಇದೆ ಅಂತೇಳಲಾಗ್ತಿದೆ. ಆದ್ರೆ ಈ ಬಗ್ಗೆ ಇಮ್ರಾನ್‌ ಖಾನ್‌ IMFಗೆ ಈ ಸಾಲ ವಿಸ್ತರಣೆ ವಿಚಾರ ಹೋಲ್ಡ್‌ನಲ್ಲಿಡುವಂತೆ ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply