ನನ್ನ ಪತ್ನಿಗೆ ವಿಷಪೂರಿತ ಆಹಾರ: ಸೇನೆ ವಿರುದ್ದ ಇಮ್ರಾನ್‌ ಆರೋಪ!

masthmagaa.com:

ಸೆರೆವಾಸ ಅನುಭವಿಸ್ತಿರೊ ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ದೊಡ್ಡ ಆರೋಪ ಮಾಡಿದ್ದಾರೆ. ಪತ್ನಿ ಬುಶ್ರಾ ಬೀಬಿಗೆ ವಿಷಪೂರಿತ ಆಹಾರ ನೀಡಲಾಗ್ತಿದೆ. ಹೀಗಾಗಿ ಅದನ್ನ ಸೇವಿಸಿದ ನನ್ನ ಪತ್ನಿಯ ನಾಲಿಗೆ ಮೇಲೆ ಗಾಯಗಳಾಗಿವೆ. ಈ ಕೃತ್ಯದ ಹಿಂದೆ ಯಾರಿದ್ದಾರೊ ಅನ್ನೊದು ನನಗೆ ಗೊತ್ತಿದೆ. ಆಕೆಗೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಅದಕ್ಕೆ ಪಾಕ್‌ ಸೇನಾ ಮುಖ್ಯಸ್ಥ ಅಸಿಮ್‌ ಮುನೀರ್‌ ಅವ್ರೆ ಜವಾಬ್ದಾರಿ ಅಂತ ಇಮ್ರಾನ್‌ ಗುಟುರು ಹಾಕಿದ್ದಾರೆ. ಅಲ್ದೇ ಈ ವಿಚಾರವಾಗಿ ಸಂಬಂಧ ಪಟ್ಟ ನ್ಯಾಯಾಧೀಶರಿಗೆ ಇಮ್ರಾನ್‌ ದೂರು ನೀಡಿದ್ದಾರೆ. ತೋಷಖಾನಾ(ಗಿಫ್ಟ್‌ ಕೇಸ್‌) ಪ್ರಕರಣದಲ್ಲಿ ಇಮ್ರಾನ್‌ ಪತ್ನಿ ಬುಶ್ರಾ ಜೈಲು ಶಿಕ್ಷೆ ವಿಧಿಸಲಾಗಿತ್ತು. ಹೀಗಾಗಿ ಅವ್ರ ಖಾಸಗಿ ನಿವಾಸವನ್ನ ಜೈಲಾಗಿ ಪರಿವರ್ತಿಸಿ ಅಲ್ಲೆ ಅವ್ರಿಗೆ ಶಿಕ್ಷೆ ನೀಡಲಾಗ್ತಿದೆ, ಅದನ್ನ ಪಾಕ್‌ ತನಿಖಾ ದಳ ಕಂಟ್ರೋಲ್‌ ಮಾಡ್ತಿರೊ ಹೊತ್ತಲ್ಲೆ ಈ ಆರೋಪ ಕೇಳಿ ಬಂದಿದೆ.

-masthmagaa.com

Contact Us for Advertisement

Leave a Reply