ಉಳಿದೆರಡು ಟೆಸ್ಟ್​ಗೆ ರಹಾನೆನೇ ಕ್ಯಾಪ್ಟನ್​, ರೋಹಿತ್​ ಉಪನಾಯಕ!

masthmagaa.com:

ಭಾರತ-ಆಸ್ಟ್ರೇಲಿಯಾ ನಡುವಿನ 3 ಮತ್ತು 4ನೇ ಟೆಸ್ಟ್​ ಪಂದ್ಯಕ್ಕೆ ರೋಹಿತ್​ ಶರ್ಮಾರನ್ನ ಉಪನಾಯಕನಾಗಿ ನೇಮಿಸಲಾಗಿದೆ. 2ನೇ ಟೆಸ್ಟ್​ನಲ್ಲಿ ನಾಯಕನ ಜವಾಬ್ದಾರಿ ನೆರವೇರಿಸಿ ತಂಡವನ್ನ ಗೆಲ್ಲಿಸಿದ್ದ ಅಜಿಂಕ್ಯಾ ರಹಾನೆಯೇ ಉಳಿದೆರಡು ಪಂದ್ಯಗಳಿಗೂ ಕ್ಯಾಪ್ಟನ್​ ಆಗಿ ಮುಂದುವರಿಯಲಿದ್ದಾರೆ. ಚೇತೇಶ್ವರ ಪೂಜಾರ ಬದಲು ರೋಹಿತ್ ಶರ್ಮಾ ವೈಸ್ ಕ್ಯಾಪ್ಟನ್ ಆಗಲಿದ್ದಾರೆ. ಆಸ್ಟ್ರೇಲಿಯಾದಲ್ಲಿ 14 ದಿನ ಕ್ವಾರಂಟೈನ್​ ಮುಗಿಸಿರುವ ರೋಹಿತ್​ ಮೊನ್ನೆಯಷ್ಟೇ ತಂಡವನ್ನ ಸೇರಿದ್ದರು. ಇನ್ನು ಗಾಯಗೊಂಡಿರುವ ವೇಗಿ ಉಮೇಶ್ ಯಾದವ್ ಜಾಗಕ್ಕೆ ಟಿ. ನಟರಾಜನ್​ ಅವರನ್ನ ರಿಪ್ಲೇಸ್​ಮೆಂಟ್​ ಅಂತ ಬಿಸಿಸಿಐ ಘೋಷಿಸಿದೆ. ನಟರಾಜನ್​ ಬಗ್ಗೆ ಇಲ್ಲಿ ಸ್ವಲ್ಪ ಹೇಳಬೇಕು. ವೇಗಿ ನವದೀಪ್ ಸೈನಿ ಗಾಯಗೊಂಡಾಗ ನಟರಾಜನ್​ಗೆ ಒಂಡೇ ತಂಡದಲ್ಲಿ ಸ್ಥಾನ ಸಿಕ್ತು. ಅದಾದ ಬಳಿಕ ವರುಣ್​ ಚಕ್ರವರ್ತಿ ಗಾಯಗೊಂಡಾಗ ಟಿ-20 ತಂಡದಲ್ಲಿ ಸ್ಥಾನ ಸಿಕ್ತು. ಇದೀಗ ಉಮೇಶ್​ ಯಾದವ್ ಗಾಯಗೊಂಡಿರೋದ್ರಿಂದ ಟೆಸ್ಟ್​ ತಂಡದಲ್ಲೂ ನಟರಾಜನ್​ಗೆ ಸ್ಥಾನ ಸಿಕ್ಕಂತಾಗಿದೆ.

-masthmagaa.com

Contact Us for Advertisement

Leave a Reply