ವಿರಾಟ..ಶ್ರೇಯ..! ಭಾರತ ಸೆಮಿಸ್‌ ರನ್‌ ಕ್ರಾಂತಿ!

masthmagaa.com:

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೀತಿರೋ ಭಾರತ-ನ್ಯೂಜಿಲೆಂಡ್ ನಡುವಿನ ವಿಶ್ವಕಪ್‌ ಮೊದಲನೇ ಸೆಮಿ-ಫೈನಲ್‌ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳು ನ್ಯೂಜಿಲೆಂಡ್‌ ಬೌಲರ್‌ಗಳ ಬೆವರಿಳಿಸಿದ್ದಾರೆ.‌ ಟಾಸ್‌ ಗೆದ್ದು ಬ್ಯಾಟಿಂಗ್‌ಗಿಳಿದ ರೋಹಿತ್‌ ಪಡೆ‌ 4 ವಿಕೆಟ್‌ ನಷ್ಟಕ್ಕೆ 397 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿದೆ. ಎಂದಿನಂತೆ ಅಗ್ರೆಸಿವ್‌ ಮೈಂಡ್‌ಸೆಟ್‌ನಲ್ಲಿ ಕಣಕ್ಕಿಳಿದ ರೋಹಿತ್‌ ಪವರ್‌ ಪ್ಲೇನಲ್ಲಿ 4 ಬೌಂಡರಿ, 4 ಸಿಕ್ಸರ್‌ ಸಿಡಿಸಿ ಒಳ್ಳೆಯ ಅಡಿಪಾಯ ಹಾಕಿ ಔಟ್‌ ಆದ್ರು. ನಂತರ ಗಿಲ್‌(80)*, ಕೊಹ್ಲಿ(117), ಶ್ರೇಯಸ್‌ ಅಯ್ಯರ್‌(105)ನ ಹಿಡಿದು ನಿಲ್ಲಿಸೋಕೆ ನ್ಯೂಜಿಲೆಂಡ್‌ ಬೌಲರ್‌ಗಳ ಶತಪ್ರಯತ್ನ ಫಲ ಕೊಡಲಿಲ್ಲ. ರನ್‌ಮಷಿನ್‌ ವಿರಾಟ್‌ ಕೊಹ್ಲಿ ODIನಲ್ಲಿ 50 ನೇ ಶತಕ ಬಾರಿಸೊ ಮೂಲಕ ಕ್ರಿಕೆಟ್‌ ದೇವರು ತೆಂಡೂಲ್ಕರ್‌ ಹೆಸರಲ್ಲಿದ್ದ ODI ಸೆಂಚುರಿಗಳ ರೆಕಾರ್ಡನ್ನ ಸಚಿನ್‌ ತವರಲ್ಲೆ ಮುರಿದಿದ್ದಾರೆ. ಜೊತೆಗೆ ಒಂದೇ ಸೀಸನ್‌ನಲ್ಲಿ 673 ರನ್‌ ಹೊಡೆದು ತಂಡವೊಂದರ ಪರ ಅತಿ ಹೆಚ್ಚು ರನ್‌ ಗಳಿಸಿದ್ದ ತೆಂಡೂಲ್ಕರ್ ರೆಕಾರ್ಡನ್ನು ಕೂಡ 20 ವರ್ಷಗಳ ಬಳಿಕ ಕೊಹ್ಲಿ ಮುರಿದಿದ್ದಾರೆ. ಪ್ರಸ್ತುತ ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್‌ 711 ರನ್‌ ಗಳಿಸಿದ್ದಾರೆ. ವಿಶೇಷ ಏನಪ್ಪ ಅಂದ್ರೆ ಇದೇ ಗ್ರೌಂಡ್‌ನಲ್ಲಿ 2013 ನವೆಂಬರ್‌ 15ರಂದು, ಅಂದ್ರೆ ಇದೇ ದಿನ ಸಚಿನ್‌ ತಮ್ಮ 200ನೇ ಟೆಸ್ಟ್‌ ಮ್ಯಾಚ್‌ ಆಡಿ ಕೊನೆಯ ಬಾರಿಗೆ ಬ್ಯಾಟ್‌ ಹಿಡಿದಿದ್ರು. ಇಂದು ಅದೇ ಕ್ರಿಕೆಟ್‌ ದೇವರ ಸಮ್ಮುಖದಲ್ಲೆ ವಿರಾಟ್‌ ತಮ್ಮ 50ನೇ ODI ಸೆಂಚುರಿ ಬಾರಿಸಿ, ಒಂದು ಮೆಮೊರೆಬಲ್‌ ಇವೆಂಟ್‌ ಕ್ರಿಯೇಟ್‌ ಮಾಡಿದ್ದಾರೆ. ಸೆಂಚುರಿ ಬಾರಿಸುತ್ತಲೇ ಸ್ಟಾಂಡ್‌ನಲ್ಲಿದ್ದ ಸಚಿನ್‌ ತೆಂಡೂಲ್ಕರ್‌ಗೆ ಶಿರಬಾಗಿ ಸಲ್ಯೂಟ್‌ ಮಾಡಿ ಗೌರವ ಸೂಚಿಸಿದ್ದಾರೆ. ಮುಂಬೈ ಕ್ರೌಡ್‌, ಪಂದ್ಯದಲ್ಲಿ ಹಾಜರಿರೊ ಇಂಗ್ಲೆಂಡ್ ಫುಟ್‌ಬಾಲ್‌ ಲೆಜೆಂಡ್‌ ಡೇವಿಡ್‌ ಬೆಕ್ಹಮ್‌ ಸೇರಿದ ದೊಡ್ಡ ತಾರಾಬಳಗ ಇಂತಹ ಎಮೋಶನಲ್‌, ಹಿಸ್ಟಾರಿಕ್‌ ಮೊಮೆಂಟ್‌ ಒಂದನ್ನ ಕಣ್ತುಂಬಿಕೊಂಡಿದ್ದಾರೆ. ಇನ್ನು ಶ್ರೇಯಸ್‌ ಅಯ್ಯರ್‌ ಸಹ ಬ್ಯಾಕ್‌ ಟು ಬ್ಯಾಕ್‌ ಸೆಂಚುರಿ ಬಾರಿಸಿದ್ದಾರೆ. ಶ್ರೇಯಸ್‌ 4 ಬೌಂಡರಿ, 8 ಸಿಕ್ಸರ್‌ ಸಿಡಿಸಿ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಕೊನೆಯಲ್ಲಿ ಕೆಎಲ್‌ ರಾಹುಲ್‌ ಕ್ಯಾಮಿಯೊ ಇನ್ನಿಂಗ್ಸ್‌ನಿಂದ ನ್ಯೂಜಿಲ್ಯಾಂಡ್‌ಗೆ ಭಾರತ 398 ರನ್‌ಗಳ ಟಾರ್ಗೆಟ್‌ ನೀಡಿದೆ. ಇದು ವಿಶ್ವಕಪ್‌ ನಾಕೌಟ್‌ ಪಂದ್ಯಗಳಲ್ಲಿ ಭಾರತದ ಅತಿ ಹೆಚ್ಚು ಸ್ಕೋರ್‌ ಕೂಡ ಹೌದು.

ಇನ್ನು ನಾಳೆ ಕೊಲ್ಕಾತ್ತಾದ ಈಡನ್‌ ಗಾರ್ಡನ್‌ ಸ್ಟೇಡಿಯಂನಲ್ಲಿ ನಡೆಯೋ ಎರಡನೇ ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯಾ-ಸೌತ್ ಆಫ್ರಿಕಾ ತಂಡಗಳು ಸೆಣಸಲಿವೆ. ಇಂದು ಮತ್ತು ನಾಳೆ ಗೆಲ್ಲೊ ತಂಡಗಳು ಇದೇ 19ರ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯೋ ಅಂತಿಮ ಕಾಳಗದಲ್ಲಿ ಕಪ್‌ಗಾಗಿ ಕಾದಾಡಲಿವೆ.

-masthmagaa.com

Contact Us for Advertisement

Leave a Reply