ಭಯೋತ್ಪಾಕರಿಗೆ ಮೆಸೇಜ್‌ ಕಳಿಸೋಕೆ ಹೆಲ್ಪ್‌! 14 ಮೆಸೇಜಿಂಗ್‌ ಆಪ್‌ ಬ್ಯಾನ್‌ ಮಾಡಿದ ಭಾರತ!

masthmagaa.com:

ಭಾರತ ಸರ್ಕಾರ ಸುಮಾರು 14 ಮೊಬೈಲ್ ಅಪ್ಲಿಕೇಶನ್‌ಗಳನ್ನ ಬ್ಯಾನ್‌ ಮಾಡಿದೆ. ಈ ಮೆಸೇಜ್ ಆಪ್‌ಗಳ ಮೂಲಕ ಪಾಕಿಸ್ತಾನದಲ್ಲಿ ಕುಳಿತ ಉಗ್ರರು, ಕಾಶ್ಮೀರದಲ್ಲಿರುವ ಉಗ್ರರು ಹಾಗೂ ಅವರ ಬೆಂಬಲಿಗರಿಗೆ ಮಾಹಿತಿ ನೀಡ್ತಾ ಇದ್ರು ಅಂತ ಗೊತ್ತಾಗಿದೆ. Crypviser, Enigma, IMO, Element, Second line, Zangi ಸೇರಿ 14 ಆಪ್‌ಗಳನ್ನ ರಾಷ್ಟ್ರೀಯ ಭದ್ರತೆಯ ಕಾಯ್ದೆಯಡಿ ಬ್ಲಾಕ್‌ ಮಾಡಲಾಗಿದೆ. ಈ ಮೂಲಕ ರಾಷ್ಟ್ರೀಯ ಭದ್ರತೆ ಕಾರಣ ಕೊಟ್ಟು 2020ರ ಜೂನ್‌ನಿಂದ ಇಲ್ಲಿತನಕ ಸುಮಾರು 250 ಮೊಬೈಲ್‌ ಅಪ್ಲಿಕೇಶ್‌ನ್‌ಗಳನ್ನ ಬ್ಲಾಕ್‌ ಮಾಡಿದಂತಾಗಿದೆ. ಆ ಪೈಕಿ ಚೀನಾದ್ದೇ 200 ಆಪ್‌ಗಳಿವೆ.

-masthmagaa.com

Contact Us for Advertisement

Leave a Reply