masthmagaa.com:

ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ನಡೀತಿರೋ ನಡುವೆಯೇ ಅಕ್ಕಪಕ್ಕದ ದೇಶಗಳಿಗೂ ಲಸಿಕೆ ಪೂರೈಸಲು ಭಾರತ ಮುಂದಾಗಿದೆ. ಭಾರತದಿಂದ ವಿದೇಶಕ್ಕೆ ಲಸಿಕೆ ಪೂರೈಕೆ ಆರಂಭವಾಗಿದೆ. ಸೀರಂ ಇನ್​ಸ್ಟಿಟ್ಯೂಟ್​ನ ‘ಕೋವಿಶೀಲ್ಡ್​’ ಲಸಿಕೆಯ ಒಂದೂವರೆ ಲಕ್ಷ ಡೋಸ್​ಗಳು ಮುಂಬೈ ಏರ್​ಪೋರ್ಟ್​ನಿಂದ ಭೂತಾನ್​ನ ಥಿಂಪು ಏರ್​ಪೋರ್ಟ್​ಗೆ ರವಾನೆಯಾಗಿದೆ. ಇದು ಭೂತಾನ್​ಗೆ ಭಾರತ ಸರ್ಕಾರದ ಗಿಫ್ಟ್. ಈ ಮೂಲಕ ಭಾರತದಿಂದ ಲಸಿಕೆ ಪಡೆದ ಮೊದಲ ದೇಶ ಭೂತಾನ್​ ಎನಿಸಿಕೊಂಡಿದೆ. ಕೇವಲ ಲಸಿಕೆ ಮಾತ್ರವಲ್ಲ ಈ ಹಿಂದೆ 2.8 ಕೋಟಿ ರೂಪಾಯಿ ಮೌಲ್ಯದ ಪಿಪಿಇ ಕಿಟ್​, ಎನ್​95 ಮಾಸ್ಕ್, ಎಕ್ಸ್​-ರೇ ಮಷೀನ್​, ಟೆಸ್ಟ್​​ ಕಿಟ್​ಗಳನ್ನ ಭೂತಾನ್​ಗೆ ಕೊಟ್ಟಿತ್ತು ಭಾರತ. ಅಂದ್ಹಾಗೆ ಭಾರತ ಮತ್ತು ಭೂತಾನ್ ಮಧ್ಯೆ ದ್ವಿಪಕ್ಷೀಯ ಒಪ್ಪಂದವಿದೆ. ಇದರ ಪ್ರಕಾರ ಭೂತಾನ್​ನ ರಕ್ಷಣಾ ಜವಾಬ್ದಾರಿ ಭಾರತದ್ದು. ಹೀಗಾಗಿಯೇ ಡೋಕ್ಲಾಮ್​ನಲ್ಲಿ ಚೀನಾ ಕಿರಿಕ್ ಮಾಡ್ದಾಗ ಭಾರತ ಹೋಗಿ ಅದರ ನೆರವಿಗೆ ನಿಂತಿತ್ತು.

ಕೇವಲ ಭೂತಾನ್ ಮಾತ್ರವಲ್ಲ ಬಾಂಗ್ಲಾದೇಶ, ನೇಪಾಳ, ಮಾಲ್ಡೀವ್ಸ್​, ಮ್ಯಾನ್ಮಾರ್, ಸೆಶೆಲ್​ ಮುಂತಾದ ದೇಶಗಳಿಗೂ ಭಾರತ ಲಸಿಕೆ ಕಳಿಸಿಕೊಡ್ತಿದೆ. ಮುಂದಿನ ದಿನಗಳಲ್ಲಿ ಶ್ರೀಲಂಕಾ, ಅಫ್ಘನಿಸ್ತಾನ ಮತ್ತು ಮಾರಿಷಸ್ ದೇಶಗಳಿಗೂ ಲಸಿಕೆ ಪೂರೈಕೆಯಾಗಲಿದೆ. ಇಂಟರೆಸ್ಟಿಂಗ್​ ಅಂದ್ರೆ ಈ ದೇಶಗಳ ಪಟ್ಟಿಯಲ್ಲಿ ಪಕ್ಕದ ಪಾಕಿಸ್ತಾನ ಇಲ್ಲ.

-masthmagaa.com

Contact Us for Advertisement

Leave a Reply