ಲಾಸ್ಟ್‌ ಮ್ಯಾಚ್‌ನಲ್ಲಿ ಅದ್ಬುತ ಪ್ರದರ್ಶನ ತೋರಿ ಸರಣಿ ಸಮಬಲಗೊಳಿಸಿದ ಭಾರತ!

masthmagaa.com:

ನಿನ್ನೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಭಾರತ ಹಾಗೂ ದ.ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯಗಳಿಸಿದೆ. ಈ ಮೂಲಕ ಟಿ-20 ಸರಣಿಯನ್ನ 1-1 ಅಂತರದಿಂದ ಭಾರತ ಸಮಬಲಗೊಳಿಸಿದೆ. ಟಾಸ್‌ ಗೆದ್ದು ಫೀಲ್ಢಿಂಗ್‌ ಆಯ್ದುಕೊಂಡ ಸೌತ್‌ ಆಫ್ರಿಕಾಗೆ ಭಾರತ ನಾಯಕ ಸೂರ್ಯಕುಮಾರ್‌ ಯಾದವ್ ಭರ್ಜರಿ ಶತಕ ಹಾಗೂ ಜೈಸ್ವಾಲ್‌ ಸ್ಪೋಟಕ ಆಟದ ನೆರವಿನೊಂದಿಗೆ 7 ವಿಕೆಟ್‌ ನಷ್ಟಕ್ಕೆ 201 ರನ್‌ಗಳ ಟಾರ್ಗೆಟ್‌ ನೀಡಿತ್ತು. ಗುರಿ ಬೆನ್ನತ್ತಿದ ಹರಿಣಗಳಿಗೆ ಕುಲ್ದೀಪ್‌ ಯಾದವ್‌ 5 ವಿಕೆಟ್‌ ಪಡೆದು ಕಂಟಕವಾಗಿ ಪರಿಣಮಿಸಿದ್ರು. ಕೊನೆಗೆ 13.5 ಓವರ್‌ಗಳಲ್ಲಿ 95 ರನ್‌ಗೆ ಸರ್ವ ಪತನ ಕಂಡ ದಕ್ಷಿಣ ಆಫ್ರಿಕಾ ಹೀನಾಯ ಸೋಲು ಕಂಡಿತು. ಆ ಮೂಲಕ ಭಾರತ ಸರಣಿಯನ್ನ ಡ್ರಾ ಮಾಡಿಕೊಳ್ಳಲು ಶಕ್ತವಾಯಿತು. ಇನ್ನು ಸರಣಿಯುದ್ದಕ್ಕೂ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನ ತೋರಿದ ಸೂರ್ಯಕುಮಾರ್‌ ಯಾದವ್‌ ಸರಣಿ ಶ್ರೇಷ್ಠ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

-masthmagaa.com

Contact Us for Advertisement

Leave a Reply