ಅತೀ ಹೆಚ್ಚು ಬಾರಿ ಇಂಟರ್‌ನೆಟ್‌ ಶಟ್‌ಡೌನ್‌! ಭಾರತ ಹೊಸ ದಾಖಲೆ!

masthmagaa.com:

ಇಡೀ ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಇಂಟರ್‌ನೆಟ್‌ ಶಟ್‌ಡೌನ್‌ ಮಾಡಿದ ಪಟ್ಟ ಇದೀಗ ಮತ್ತೆ ಭಾರತದ ಪಾಲಾಗಿದೆ. ಕಳೆದ 5 ವರ್ಷಗಳಿಂದ ಹೆಚ್ಚು ಬಾರಿ ಇಂಟರ್‌ನೆಟ್‌ ಶಟ್‌ಡೌನ್‌ ಮಾಡೋದ್ರಲ್ಲಿ ಭಾರತ ಜಾಗತಿಕ ನಾಯಕ ಆಗಿದೆ. ಅಂದ್ಹಾಗೆ ಈ ವರ್ಷ ಮಣಿಪುರದಲ್ಲಿ ನಡೆದ ಜನಾಂಗೀಯ ಸಂಘರ್ಷದಿಂದ, ಅಲ್ಲಿ ಸುಮಾರು 200ಕ್ಕೂ ಹೆಚ್ಚು ದಿನಗಳ ಕಾಲ ಇಂಟರ್‌ನೆಟ್‌ ಶಟ್‌ಡೌನ್‌ ಮಾಡಲಾಗಿತ್ತು. ಇನ್ನು ಕೇಂದ್ರ ಸರ್ಕಾರ 2019 ರಲ್ಲಿ ಜಮ್ಮು & ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡೋ ಬಗ್ಗೆ ನಿರ್ಧರಿಸಿತ್ತು. ಆ ಟೈಮ್‌ನಲ್ಲಿ ಜಮ್ಮು & ಕಾಶ್ಮೀರದಲ್ಲಿ 552 ದಿನಗಳ ಕಾಲ ಇಂಟರ್‌ನೆಟ್‌ ಶಟ್‌ಡೌನ್‌ ಮಾಡಲಾಗಿತ್ತು. ಈ ಮೂಲಕ ಕಳೆದ 5 ವರ್ಷಗಳಲ್ಲಿ, ಭಾರತದಲ್ಲಿ ಅತೀ ಹೆಚ್ಚು ಬಾರಿ ಇಂಟರ್‌ನೆಟ್‌ ಶಟ್‌ಡೌನ್‌ ಆಗೋಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply