ಭಾರತದಿಂದ ಅಧಿಕಾರಿಗಳನ್ನ ವಾಪಾಸ್‌ ಕರಿಸಿಕೊಳ್ಳಿ: ಕೆನಡಾಕ್ಕೆ ಭಾರತ ಎಚ್ಚರಿಕೆ

masthmagaa.com:

ಭಾರತ ಹಾಗೂ ಕೆನಡಾ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ಹೋಗಿದೆ. ಇದೀಗ ಭಾರತದಲ್ಲಿರೊ ತನ್ನ 40ಕ್ಕೂ ಅಧಿಕ ಅಧಿಕಾರಿಗಳನ್ನ ವಾಪಾಸ್‌ ಕರೆಸಿಕೊಳ್ಳುವಂತೆ ಕೆನಡಾ ಸರ್ಕಾರಕ್ಕೆ ಭಾರತ ವಾರ್ನಿಂಗ್‌ ಮಾಡಿದೆ. ಅಷ್ಟೇ ಅಲ್ದೇ ಅಧಿಕಾರಿಗಳನ್ನ ತನ್ನ ದೇಶಕ್ಕೆ ಕರೆಸಿಕೊಳ್ಳಲು ಭಾರತ ಡೆಡ್‌ಲೈನ್‌ ನೀಡಿದೆ. ಅಕ್ಟೋಬರ್‌ 10ರ ಒಳಗೆ ಈ ಕೆಲಸ ಆಗಬೇಕಿದೆ. ಇನ್ನು ಭಾರತದಲ್ಲಿ ಕೆನಡಾದ ಒಟ್ಟು 62 ಅಧಿಕಾರಿಗಳಿದ್ದಾರೆ. ಎರಡು ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡ್ತಿದ್ದಂತೆ ಈ ಮೊದಲು ಅಧಿಕಾರಿಗಳ ನಂಬರ್‌ನ್ನ 41ಕ್ಕೆ ಇಳಿಸುವಂತೆ ಭಾರತ ಹೇಳಿತ್ತು. ಆದ್ರೆ ಇದೀಗ ಅಧಿಕಾರಿಗಳ ಸೈಜ್‌ನ್ನ ಕಂಪ್ಲೀಟಾಗಿ ಕಡಿಮೆ ಮಾಡೋಕೆ ಭಾರತ ಮುಂದಾಗಿದೆ. ಇನ್ನು ಈ ಬಗ್ಗೆ ಮಾತಾಡಿರೊ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂಧಮ್‌ ಬಗ್ಚಿ, ಭಾರತದಲ್ಲಿರೊ ಕೆನಡಾ ಅಧಿಕಾರಿಗಳ ಸಂಖ್ಯೆ, ಕೆನಡದಲ್ಲಿರೊ ಭಾರತೀಯ ಅಧಿಕಾರಿಗಳ ಸಂಖ್ಯೆಗಿಂತ ಹೆಚ್ಚಿದೆ. ಎರಡು ಕಡೆ ಸಮಾನತೆ ಇರಬೇಕು ಅಂತ ಹೇಳಿದ್ದಾರೆ. ಅಂದ್ರೆ ಎರಡು ಕಡೆ ಸೇಮ್‌ ಅಧಿಕಾರಿಗಳು ಇರ್ಬೇಕು ಅಂತ ಹೇಳಿದ್ದಾರೆ. ಇತ್ತ ಭಾರತದ ನಿರ್ಧಾರ ಬೆನ್ನಲ್ಲೆ ಕೆನಡ ಪ್ರತಿಕ್ರಿಯೆ ನೀಡಿದೆ. ಕೆನಡ ಅಧಿಕಾರಿಗಳನ್ನ ಹೀಗೆ ದೇಶದಿಂದ ಕಳಿಸೋದು ಎರಡು ದೇಶಗಳ ನಡುವಿನ ಪರಿಸ್ಥಿತಿಗೆ ಯಾವುದೇ ಸಹಾಯ ಮಾಡಲ್ಲ. ಅಲ್ದೇ ಈಗಿರುವ ಸಂಬಂಧಗಳನ್ನ ಇನ್ನಷ್ಟು ಹೆಚ್ಚು ಹಾಳು ಮಾಡುತ್ತೆ ಅಂತ ಕೆನಡದ ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಯ ಮುಖ್ಯಸ್ಥ ಪೀಟರ್‌ ಬೋಹೆಮ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply