ಪಾಕ್‌ ನಿವೃತ್ತ ಸೈನಿಕರೇ ಕಾಶ್ಮೀರದಲ್ಲಿ ಭಯೋತ್ಪಾದಕರು!

masthmagaa.com:

ಜಮ್ಮು ಕಾಶ್ಮೀರದಲ್ಲಿ ಸೇನೆ ನಡೆಸುತ್ತಿರೋ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ಹತ್ಯೆಯಾದ ಉಗ್ರರಲ್ಲಿ ಪಾಕಿಸ್ತಾನದ ನಿವೃತ್ತ ಸೈನಿಕರೂ ಇದ್ರ ಅನ್ನೋ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಗಡಿ ನುಸುಳೋಕೆ ಯತ್ನಿಸುತ್ತಿರುವ ಭಯೋತ್ಪಾದಕರು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ತರಬೇತಿ ಪಡೆದು ಬರ್ತಿದ್ದಾರೆ. ಅಂಥವರ ಪೈಕಿ ಪಾಕ್‌ನ ನಿವೃತ್ತ ಸೈನಿಕರೂ ಸೇರಿದ್ದಾರೆ. ಆದರೆ, ನಮ್ಮ ಯೋಧರ ತ್ಯಾಗ, ಬಲಿದಾನಗಳು ಅವರ ಸಂಚುಗಳನ್ನು ವಿಫಲಗೊಳಿಸಿ ರಾಷ್ಟ್ರರಕ್ಷಣೆಯಲ್ಲಿನ ಶೌರ್ಯ ಪ್ರದರ್ಶಿಸುತ್ತಿವೆ ಅಂತ ಲೆಫ್ಟಿನೆಂಟ್ ಜನರಲ್‌ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply