ಐರ್ಲೆಂಡ್‌ ಪತ್ರಿಕೆಯಲ್ಲಿ PM ಮೋದಿ, ಭಾರತದ ಬಗ್ಗೆ ಟೀಕೆ!

masthmagaa.com:

ಚುನಾವಣೆ ಹತ್ತಿರ ಬರ್ತಿದ್ದಂತೆ ಭಾರತದ ಚುನಾವಣೆ ಹಾಗೂ ಪ್ರಧಾನಿ ಮೋದಿಯವ್ರ ಬಗ್ಗೆ ವಿದೇಶಿ ಮಾಧ್ಯಮಗಳು ವರದಿಗಳು ಹೆಚ್ಚಾಗ್ತಿವೆ. ಇದೀಗ ಈ ಲಿಸ್ಟ್‌ಗೆ ಐರ್ಲೆಂಡ್‌ ಕೂಡ ಸೇರಿದ್ದು, ವಿವಾದಾತ್ಮಕ ಲೇಖನ ಬರೆದು ಸುದ್ದಿಯಾಗಿದೆ. ಅಲ್ಲದೆ ಇದೇ ಲೇಖನ ಕಾಂಗ್ರೆಸ್‌ ಬಿಜೆಪಿ ಕಿತ್ತಾಟಕ್ಕೂ ಕಾರಣವಾಗಿದೆ. ಏಪ್ರಿಲ್‌ 11ರ ಐರಿಷ್‌ ಟೈಮ್ಸ್‌ ಪತ್ರಿಕೆ ʻಮೋದಿ ಹಿಡಿತ ಬಿಗಿ ಮಾಡಿದ್ದಾರೆʼ ಅನ್ನೋ ಶೀರ್ಷಿಕೆ ಅಡಿಯಲ್ಲಿ ಲೇಖನ ಪ್ರಕಟಿಸಿತ್ತು. ಇದ್ರಲ್ಲಿ ʻಅಸಹಿಷ್ಣುತೆಯ ಹಿಂದೂ ಬಹುಸಂಖ್ಯಾತವಾದವೇ ಈಗ ಟ್ರೆಂಡ್‌ʼ ಅಂತೇಳಿತ್ತು. ಅಲ್ಲದೆ ಪಿಎಂ ಮೋದಿಯವ್ರನ್ನ ಟರ್ಕಿ ನಾಯಕ ಎರ್ಡೋಆನ್‌ಗೆ ಕಂಪೇರ್‌ ಮಾಡಿ, ಮೋದಿಯವ್ರ ಹಿಂದೂ ರಾಷ್ಟ್ರೀಯವಾದದಿಂದ ಭಾರತದಲ್ಲಿ ಮುಸ್ಲಿಂ ವಿರೋಧಿ ಧೋರಣೆ ಹಾಗೂ ಅಶಾಂತಿ ಹೆಚ್ಚಾಗಿದೆ. ಅಲ್ಲದೆ ಭಾರತದ ರಾಜಕೀಯ ಸಾಂಪ್ರದಾಯಿಕ ನೆಹ್ರೂ-ಪ್ರೇರಿತ ಜಾತ್ಯಾತೀಯತೆಯಿಂದ ದೂರ ಸರಿದಿದೆʼ ಅಂತ ಆರೋಪಿಸಿತ್ತು. ಇದಕ್ಕೆ ರಿಪ್ಲೈ ಮಾಡಿದ್ದ ಐರ್ಲೆಂಡ್‌ನಲ್ಲಿರೋ ಭಾರತದ ರಾಯಭಾರಿ ಅಖಿಲೇಶ್‌ ಮಿಶ್ರ, ʻಲೇಖನ ಪಕ್ಷಪಾತದಿಂದ ತುಂಬಿದೆ, ಪೂರ್ವಗ್ರಹ ಪೀಡಿತವಾಗಿದೆʼ ಅಂತೇಳಿದ್ರು. ಜೊತೆಗೆ ತಮ್ಮ ರಿಪ್ಲೈನಲ್ಲಿ ಹಿಂದಿನ ಕಾಂಗ್ರೆಸ್‌ನ್ನೂ ಟಾರ್ಗೆಟ್‌ ಮಾಡಿ, ʻ55 ವರ್ಷಗಳ ಆಢಳಿತದಲ್ಲಿ ಬೇರೂರಿರೋ ಭ್ರಷ್ಟಾಚಾರದ ವಿರುದ್ಧ ಭಾರತ ಹೋರಾಡ್ತಿದೆ. ಇದೇ ಕಾರಣದಿಂದ ಪಿಎಂ ಮೋದಿ ಜನಪ್ರಿಯತೆ ಜಾಸ್ತಿಯಾಗಿದೆ. ಬಿಜೆಪಿ, ತನಿಖಾ ಸಂಸ್ಥೆಗಳಿಗೆ ಫ್ರೀ ಹ್ಯಾಂಡ್‌ ನೀಡಿರೋದ್ರಿಂದ, ಭಾರತದಲ್ಲಿ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಗಳು ಯಶಸ್ವಿಯಾಗಿ ನಡೆದಿವೆʼ ಅಂತ ಇಂಡಿಯನ್‌ ಎಂಬಸಿಯ ಅಫಿಸಿಯಲ್‌ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹೇಳಿದ್ರು. ಇದ್ರಿಂದ ಈಗ ಕಾಂಗ್ರೆಸ್‌ ಕೆಂಡವಾಗಿದೆ. ʻರಾಯಭಾರಿ ಅಖಿಲೇಶ್‌ ಮಿಶ್ರ ಮಾತಿನಲ್ಲಿ ವೃತ್ತಿಪರತೆ ಇಲ್ಲ.. ಇದು ಅವಮಾನಕರ. ರಾಯಬಾರಿಯಾಗಿರೋರು ಪಕ್ಷದ ವಕ್ತಾರರಂತೆ ಮಾತನಾಡಿದ್ದಾರೆ. ಅವ್ರು ದೇಶವನ್ನ ವಹಿಸಿಕೊಂಡು ಮಾತನಾಡೋದು ಸರಿ. ಆದ್ರೆ ಈ ರೀತಿ ಓಪನ್‌ ಆಗಿ ದೇಶದ ವಿಪಕ್ಷದ ವಿರುದ್ಧ ಹೇಳಿಕೆ ಕೊಡೋದನ್ನ ನಾವು ನಿರೀಕ್ಷೆ ಮಾಡಿರ್ಲಲ್ಲʼ ಅಂತ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply