ಶ್ವಾಸಕೋಶದ ಮೇಲೆ ಕೋವಿಡ್‌ ಅಫೆಕ್ಟ್‌! ಭಾರತೀಯರಲ್ಲೇ ಹೆಚ್ಚು!

masthmagaa.com:

ಕೋವಿಡ್‌ 19 ಮಹಾಮಾರಿ ಬಂದು ನಾಲ್ಕು ವರ್ಷ ಕಳೆದ್ರೂ, ಅದ್ರಿಂದ ಆರೋಗ್ಯದ ಮೇಲಾದ ಪರಿಣಾಮಗಳು ಮಾತ್ರ ಜನರನ್ನ ಇನ್ನೂ ಕಾಡ್ತಿದೆ.. ಮುಂದಕ್ಕೂ ಕಾಡಲಿವೆ. ಪ್ರಮುಖವಾಗಿ ಭಾರತೀಯರಿಗೆ.. ಎಸ್‌, ಕೋವಿಡ್‌ನಿಂದ ರಿಕವರ್‌ ಆದ ಭಾರತೀಯರ ಶ್ವಾಸಕೋಶ ಅಥ್ವಾ ಲಂಗ್ಸ್‌ ಹೆಚ್ಚು ಡ್ಯಾಮೇಜ್‌ ಆಗಿದೆ. ಅವ್ರ ಶ್ವಾಸಕೋಶ ಸರಿಯಾಗಿ ಫಂಕ್ಷನ್‌ ಆಗ್ತಿಲ್ಲ. ಈ ರೀತಿ ತಮಿಳುನಾಡಿನ ವೆಲ್ಲೋರ್‌ನಲ್ಲಿರೋ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜು ನಡೆಸಿದ ಸ್ಟಡಿ ರಿಪೋರ್ಟ್‌ ಮಾಡಿದೆ. ಇದ್ರ ಪ್ರಕಾರ, ʻಯುರೋಪಿಯನ್‌ ಮತ್ತು ಚೀನಾದವ್ರಿಗೆ ಹೋಲಿಸಿದ್ರೆ ಹೆಚ್ಚಾಗಿ ಭಾರತೀಯರಲ್ಲೇ ಈ ಶ್ವಾಸಕೋಶ ಡ್ಯಾಮೇಜ್‌ ಆಗಿದೆ. ಅಂದ್ರೆ ಕೋವಿಡ್‌ನಿಂದ ರಿಕವರ್‌ ಆದವ್ರನ್ನ ಗಣನೆಗೆ ತಗೊಂಡ್ರೆ. ಕೆಲವರಲ್ಲಿ ಕ್ರಮೇಣವಾಗಿ ಒಂದು ವರ್ಷದಲ್ಲಿ ಶ್ವಾಸಕೋಶದ ಆರೋಗ್ಯ ಸ್ಥಿತಿ ನಾರ್ಮಲ್‌ಗೆ ಬಂದಿದೆ. ಆದ್ರೆ ಉಳಿದವ್ರ ಕೇಸ್‌ನಲ್ಲಿ ಶ್ವಾಸಕೋಶಕ್ಕಾದ ಡ್ಯಾಮೇಜ್‌ ವಾಸಿಯಾಗೋ ಹಾಗೇ ಕಾಣ್ತಿಲ್ಲ. ಸೋ ಇಂಥವ್ರು ತಮ್ಮ ಜೀವನ ಪರ್ಯಂತ ಡ್ಯಾಮೇಜ್‌ ಆಗಿರೋ ಶ್ವಾಸಕೋಶದ ಜೊತೆ ಜೀವನ ಸಾಗಿಸ್ಬೇಕಾಗಬಹುದುʼ ಅಂತ ಈ ಸ್ಟಡಿ ತಿಳಿಸಿದೆ.

-masthmagaa.com

Contact Us for Advertisement

Leave a Reply