ಭಾರತದ ಮೊದಲ ಸಾವರೀನ್‌ ಗ್ರೀನ್‌ ಬಾಂಡ್‌ ನಾಳೆ ಹರಾಜು!

masthmagaa.com:

ಭಾರತದ ಮೊದಲ ಸಾವರೀನ್‌ ಗ್ರೀನ್‌ ಬಾಂಡ್‌ ನಾಳೆ ಹರಾಜಾಗಲಿದೆ. ಇತರ ಸರ್ಕಾರಿ ಡೆಟ್ ಬಾಂಡ್‌ಗಳಂತೆಯೇ ಗ್ರೀನ್ ಬಾಂಡ್ ಕೂಡ ಒಂದು. ಇವು ಸರ್ಕಾರ ನೀಡುವ ಸಾಲಪತ್ರ. ಅಂದ್ರೆ ಹೂಡಿಕೆದಾರರಿಂದ ಹಣ ಪಡೆದು ಅದಕ್ಕೆ ಪ್ರತಿಯಾಗಿ ಬಾಂಡ್ ನೀಡಲಾಗುತ್ತೆ. ಈ ಹಣಕ್ಕೆ ನಿರ್ದಿಷ್ಟ ಬಡ್ಡಿ ನೀಡಲಾಗುತ್ತದೆ. ಆದ್ರೆ ಗ್ರೀನ್ ಬಾಂಡ್ ಮೂಲಕ ಸಂಗ್ರಹಿಸಲಾದ ಹಣವನ್ನ ಪರಿಸರಸ್ನೇಹಿ ಕಾರ್ಯಗಳಿಗೆ ಅಂದ್ರೆ ಸೋಲಾರ್‌ ಪವರ್‌, ವಿಂಡ್‌ ಎನರ್ಜಿ ಹಾಗೂ ಇತರ ಸಾರ್ವಜನಿಕ ವಲಯದ ಯೋಜನೆಗಳಿಗೆ ಮಾತ್ರ ಖರ್ಚು ಮಾಡಲಾಗುತ್ತೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಈ ಗ್ರೀನ್‌ ಬಾಂಡ್‌ಗಳಿಂದ ಸುಮಾರು 16 ಸಾವಿರ ಕೋಟಿ ರೂಪಾಯಿ ಪಡೆಯೋಕೆ ಸರ್ಕಾರ ಪ್ಲ್ಯಾನ್‌ ಮಾಡಿದೆ. ಇದ್ರಲ್ಲಿ ನಾಳೆ ನಡೆಯುವ ಹರಾಜಿನಲ್ಲಿ ಸುಮಾರು 8,000 ಕೋಟಿ ರೂ. ಪಡೆಯುವ ಸಾಧ್ಯತೆಯಿದೆ.

-masthmagaa.com

Contact Us for Advertisement

Leave a Reply