ವಿಶ್ವಸಂಸ್ಥೆಗೆ ನೂತನ ಶಾಶ್ವತ ಪ್ರತಿನಿಧಿಯಾಗಿ ಅರಿಂಧಮ್‌ ಬಗ್ಚಿ ನೇಮಕ!

masthmagaa.com:

ವಿಶ್ವಸಂಸ್ಥೆಗೆ ಭಾರತದ ನೂತನ ಶಾಶ್ವತ ಪ್ರತಿನಿಧಿಯಾಗಿ ವಿದೇಶಾಂಗ ಸಚಿವಾಲಯದ ವಕ್ತಾರರಾಗಿದ್ದ ಅರಿಂಧಮ್‌ ಬಗ್ಚಿ ಅವ್ರು ನೇಮಕಗೊಂಡಿದ್ದಾರೆ. ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯೂ ಆಗಿದ್ದ ಬಗ್ಚಿ ಅವ್ರು, ಶೀಘ್ರದಲ್ಲಿಯೇ ಅಧಿಕಾರ ಸ್ವೀಕರಿಸಲಿದ್ದಾರೆ. ಜೆನಿವಾದಲ್ಲಿರೊ ಇತರ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಭಾರತದ ಮುಂದಿನ ರಾಯಭಾರಿಯಾಗಲಿದ್ದಾರೆ. ಬಗ್ಚಿ, ಈ ಹಿಂದೆ ಈ ಸ್ಥಾನದಲ್ಲಿದ್ದ ಇಂದ್ರ ಮಣಿ ಪಾಂಡೆ ಅವ್ರ ಜಾಗವನ್ನ ರಿಪ್ಲೇಸ್‌ ಮಾಡಲಿದ್ದಾರೆ. ಅಂದ್ಹಾಗೆ ಬಗ್ಚಿ ಅವ್ರು ಈ ಹಿಂದೆ ಕ್ರೊವೇಷಿಯಾದಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 1995ನೇ ಬ್ಯಾಚ್‌ನ IFS ಅಧಿಕಾರಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply