5 ವರ್ಷಗಳಲ್ಲಿ 13.5 ಕೋಟಿ ಜನರ ಬಡತನದಿಂದ ಹೊರ ಬಂದಿದ್ದಾರೆ: NITI ಆಯೋಗ

masthmagaa.com:

ಭಾರತ 2015-16 ರಿಂದ 2021ರ ನಡುವೆ ಒಟ್ಟು 13.5 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ ಅಂತ NITI ಆಯೋಗ ತನ್ನ ವರದಿಯಲ್ಲಿ ಹೇಳಿದೆ. ‘National Multidimensional Poverty Index: A Progress Review 2023’ ವರದಿಯನ್ನ ರಿಲೀಸ್‌ ಮಾಡಿದೆ. ಆರೋಗ್ಯ, ಶಿಕ್ಷಣ ಹಾಗು ಜೀವನ ಗುಣಮಟ್ಟ ಈ ಆಧಾರಗಳ ಮೇಲೆ ವರದಿ ಮಾಡಲಾಗಿದೆ. ವರದಿ ಪ್ರಕಾರ 2015-16ರಲ್ಲಿ 24.85% ನಷ್ಟು ಇದ್ದ ಬಡತನ, 2019-21ರಲ್ಲಿ 14.96%ಗೆ ಇಳಿಕೆ ಆಗಿದೆ. ಇದ್ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಬಡತನ 32.59%ನಿಂದ 19.28%ಗೆ ಇಳಿಕೆಯಾದ್ರೆ, ನಗರ ಪ್ರದೇಶದಲ್ಲಿ 8.65% ನಿಂದ 5.27% ಗೆ ಇಳಿಕೆಯಾಗಿದೆ. ಅದ್ರಲ್ಲೂ ಅತಿಹೆಚ್ಚು ಜನಸಂಖ್ಯೆ ಹೊಂದಿರೊ ಉತ್ತರ ಪ್ರದೇಶದಲ್ಲಿ 3.43 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ಯುಪಿ ಸೇರಿದಂತೆ ಬಿಹಾರ, ಮಧ್ಯ ಪ್ರದೇಶ, ಒಡಿಶಾ ಹಾಗೂ ರಾಜಸ್ಥಾನದಲ್ಲಿಯೂ ಗಮನಾರ್ಹ ಇಳಿಕೆ ಕಂಡುಬಂದಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ.

-masthmagaa.com

Contact Us for Advertisement

Leave a Reply