ಏರ್‌ಬಸ್‌ ಹಾಗೂ ಇಂಡಿಗೋ ಒಪ್ಪಂದ ಬ್ರಿಟನ್‌ಗೆ ಪ್ರಮುಖ ಗೆಲುವು: ರಿಷಿ ಸುನಾಕ್‌

masthmagaa.com:

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ, ಏರ್‌ಬಸ್‌ ಜೊತೆ 500 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಮಾತಾಡಿರೋ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌, ಈ ಒಪ್ಪಂದ ನಮ್ಮ ಏರೋಸ್ಪೇಸ್‌ ವಲಯಕ್ಕೆ ಪ್ರಮುಖ ಗೆಲುವಾಗಿದೆ. ಜೊತೆಗೆ ಇಂಡಿಗೋ ಜೊತೆಗಿನ ಈ ಒಪ್ಪಂದ ಬ್ರಿಟನ್‌ಗೆ ಬಹಳ ಮುಖ್ಯವಾಗಿದ್ದು, ಅತ್ಯಂತ ಮಹತ್ವ ಪಡೆದುಕೊಂಡಿದೆ. ಅಷ್ಟೆ ಅಲ್ದೆ ಬ್ರಿಟನ್‌ನಾದ್ಯಂತ ಸಾವಿರಾರು ಉದ್ಯೋಗ ಸೃಷ್ಟಿಗೆ ಸಹಾಯವಾಗಲಿದ್ದು, ಆರ್ಥಿಕ ಬೆಳವಣಿಗೆಗೂ ಕೊಡುಗೆ ನೀಡಲಿದೆ ಅಂತ ಸುನಾಕ್‌ ಹೇಳಿದ್ದಾರೆ. ಅಂದ್ಹಾಗೆ ಭಾರತದ ಇತಿಹಾಸದಲ್ಲೇ ಒಂದೇ ಬಾರಿಗೆ 500 ವಿಮಾನಗಳನ್ನ ಖರೀದಿ ಮಾಡುವ ಒಪ್ಪಂದಕ್ಕೆ ಸಹಿ ಹಾಕಿರೋ ಹೊಸ ದಾಖಲೆ ಸೃಷ್ಟಿಸಿರೋ ಇಂಡಿಗೋ ಇತಿಹಾಸ ನಿರ್ಮಿಸಿದೆ ಅಂತ ಏರ್‌ಬಸ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇತ್ತೀಚೆಗೆ ಏರ್‌ ಇಂಡಿಯಾ ಕೂಡ ಏರ್‌ ಬಸ್‌ ಜೊತೆಯಲ್ಲಿ 470 ವಿಮಾನಗಳನ್ನ ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು.

-masthmagaa.com

Contact Us for Advertisement

Leave a Reply