ಹಿಂದೂ ಮಹಾಸಾಗರದಲ್ಲಿ ಶಕ್ತಿ ಪ್ರದರ್ಶಿಸಿದ ಭಾರತೀಯ ನೌಕಾಪಡೆ!

masthmagaa.com:

ಗಡಿಯಲ್ಲಿ ಚೀನಾ ಜೊತೆಗಿನ ಉದ್ವಿಗ್ನ ಸ್ಥಿತಿ ನಡುವೆಯೇ ಭಾರತೀಯ ನೌಕಾಪಡೆ ಇದೇ ಮೊದಲ ಬಾರಿಗೆ ತನ್ನ ವ್ಯಾಪ್ತಿಯ ಹಿಂದೂ ಮಹಾಸಾಗರದಲ್ಲಿ ಶಕ್ತಿ ಪ್ರದರ್ಶನ ಮಾಡಿದೆ. ಸ್ವದೇಶಿ ನಿರ್ಮಿತ ಯುದ್ಧವಿಮಾನ ವಾಹಕ ನೌಕೆಗಳಾದ INS ವಿಕ್ರಮಾದಿತ್ಯ ಹಾಗೂ INS ವಿಕ್ರಾಂತ್‌ನ್ನ ಒಳಗೊಂಡ ಪೂರ್ಣ ಪ್ರಮಾಣದ ಯುದ್ಧಭ್ಯಾಸ ನಡೆಸಿವೆ. ಈ ವೇಳೆ ಮಿಗ್‌-29ಕೆ ಯುದ್ಧ ವಿಮಾನಗಳು, ಹೊಸದಾಗಿ ವಾಯುಪಡೆಗೆ ಸೇರಿರೋ MH -60R, ಕಾಮೋವ್‌, ಕೀ ಸಿಂಗ್‌, ಚೇತಕ್‌ ಹಾಗೂ ದೇಶೀಯವಾಗಿ ತಯಾರಿಸಲಾದ ಹಗುರ ಯುದ್ಧವಿಮಾನಗಳು ಸೇರಿದಂತೆ ಸುಮಾರು 35 ವಿಮಾನಗಳನ್ನ ಹೊತ್ತ ಎರಡೂ ನೌಕೆಗಳು ಸಮುದ್ರದಲ್ಲಿ ಸಂಚರಿಸಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿವೆ. ಇನ್ನು ಈ ಯುದ್ಧಾಭ್ಯಾಸ ಭಾರತದ ಹಿತಾಸಕ್ತಿಯನ್ನ ಕಾಪಾಡುವಲ್ಲಿ ನೌಕಾಪಡೆಯ ಬದ್ಧತೆಯನ್ನ ಒತ್ತಿಹೇಳುತಿದ್ದು, ತನ್ನ ಅಸಾಧಾರಣ ಸಾಮರ್ಥ್ಯವನ್ನ ತೋರಿಸಿದೆ. ಈ ಸಮರಾಭ್ಯಾಸ ಭಾರತೀಯ ನೌಕಾಪಡೆಯ ಕಡಲ ಭದ್ರತೆಯನ್ನ ಹೆಚ್ಚಿಸುವ ಮತ್ತು ಹಿಂದೂ ಮಹಾಸಾಗರ ಹಾಗೂ ಅದರಾಚೆಗೂ ತನ್ನ ಎಬಿಲಿಟಿ ತೋರಿಸೋ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಅಂತ ನೇವಿ ವಕ್ತಾರ ಕಮಾಂಡರ್‌ ವಿವೇಕ್‌ ಮಧ್ವಲ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply