ಸೋಷಿಯಲ್‌ ಮೀಡಿಯಾಗಳಲ್ಲಿ ಹೆಚ್ಚಾಯ್ತು ಮಕ್ಕಳ ಮೇಲಿನ ಲೈಂಗಿಕ ಶೋಷಣೆ!

masthmagaa.com:

ಟೆಕ್‌ ದೈತ್ಯ ಕಂಪನಿಗಳು ಹಾಗೂ ಸೋಷಿಯಲ್‌ ಮೀಡಿಯಾ ಸೇರಿದಂತೆ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ನಲ್ಲಿ ಮಕ್ಕಳ ಮೇಲಿನ ಶೋಷಣೆ ಹೆಚ್ಚಾಗ್ತಿದೆ ಅಂತ ತಿಳಿದು ಬಂದಿದೆ. ಇನ್‌ಸ್ಟಾಗ್ರಾಮ್‌, ಟಿಕ್‌ ಟಾಕ್‌, ಗೂಗಲ್‌, ಅಮೇಜಾನ್‌ನ ಟ್ವಿಚ್‌ ಸೇರಿದಂತೆ ಹಲವು ಸೋಷಿಯಲ್‌ ಮೀಡಿಯಾ ಅಥವಾ ಆನ್‌ಲೈನ್‌ ಅಪ್ಲಿಕೇಶನ್‌ಗಳಲ್ಲಿ ಮಕ್ಕಳ ಶೋಷಣೆ ಅಥವಾ ಚೈಲ್ಡ್‌ ಅಬ್ಯೂಸ್‌ ಹೆಚ್ಚಾಗಿವೆ ಅಂತ ಅಮೆರಿಕದ National Center for Missing and Exploited Children ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಸಂಸ್ಥೆ ಪ್ರಕಾರ 2022ರಲ್ಲಿ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆ ಹಾಗೂ ಲೈಂಗಿಕ ಕಾರಣಕ್ಕಾಗಿ ಮಕ್ಕಳ ಸಾಗಾಟ ಕುರಿತು ಸುಮಾರು 3.20 ಕೋಟಿ ಪ್ರಕರಣಗಳು ವರದಿಯಾಗಿವೆ ಅಂತ ತಿಳಿಸಿದೆ. ಮಕ್ಕಳಿಗೆ ಆಕ್ಷೇಪಾರ್ಹ ಪೋಟೋಗಳನ್ನ ಕಳಿಸುವಂತೆ ಮಾಡಿ, ಬಳಿಕ ಹಣಕ್ಕಾಗಿ ಅವ್ರನ್ನ ಬ್ಲ್ಯಾಕ್‌ಮೇಲ್ ಮಾಡಲಾಗ್ತಿದೆ ಅಂತ ಹೇಳಿದೆ. ಅಲ್ದೆ ಈ ಕೇಸ್‌ಗಳು Discord ಮತ್ತು Omegle ಆಪ್‌ಗಳಲ್ಲಿ ಹೆಚ್ಚಾಗಿದ್ದು, Googleನಲ್ಲಿ ಈ ಕೇಸ್‌ಗಳು 27 ಲಕ್ಷಕ್ಕಿಂತಲೂ ಅಧಿಕವಾಗಿವೆ. ಜೊತೆಗೆ ಟಿಕ್‌ಟಾಕ್, ಟ್ವಿಚ್ ಮತ್ತು Grindr ಪ್ಲಾಟ್‌ಫಾರ್ಮ್‌ಗಳಲ್ಲೂ ಚೈಲ್ಡ್‌ ಅಬ್ಯೂಸ್‌ ಗಣನೀಯ ಏರಿಕೆಯನ್ನು ಕಂಡಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ.

-masthmagaa.com

Contact Us for Advertisement

Leave a Reply