18.5 ಕೋಟಿಗೆ ಮಾರಾಟವಾಗಿ IPLನಲ್ಲಿ ದಾಖಲೆ ಬರೆದ ಇಂಗ್ಲೆಂಡ್‌ ಆಟಗಾರ ಕಿರ್ರನ್!

masthmagaa.com:

ಕೇರಳದ ಕೊಚ್ಚಿಯಲ್ಲಿ ನಡೀತಾ ಇರೋ IPL 2023ರ ಮಿನಿ ಹರಾಜಿನಲ್ಲಿ ವರ್ಲ್ಡ್‌ಕಪ್‌ ವಿನ್ನರ್ಸ್‌ ಇಂಗ್ಲೆಂಡ್‌ ಆಟಗಾರರಿಗೆ ಭಾರಿ ಡಿಮ್ಯಾಂಡ್‌ ವ್ಯಕ್ತವಾಗಿದೆ. ಇಂಗ್ಲೆಂಡ್‌ನ ಸ್ಟಾರ್‌ ಆಲ್‌ರೌಂಡರ್‌ ಸ್ಯಾಮ್‌ ಕರನ್ 18.5 ಕೋಟಿ ರೂಪಾಯಿಗೆ ಮಾರಾಟವಾಗಿ ಪಂಜಾಬ್‌ ಟೀಂ ಸೇರಿದ್ದಾರೆ. ಈ ಮೂಲಕ ಐಪಿಎಲ್‌ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್‌ ಆದ ಆಟಗಾರ ಅನ್ನೊ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಕ್ರಿಸ್ ಮೋರಿಸ್ ಅವರನ್ನು 16.25 ಕೋಟಿ ನೀಡಿ ರಾಜಸ್ಥಾನ ತಂಡ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಹೆಚ್ಚಿನ ಬಿಡ್ ಮೊತ್ತವಾಗಿತ್ತು. ಇದೀಗ ಈ ದಾಖಲೆಯನ್ನು ಕರನ್ ಮುರಿದು ನೂತನ ದಾಖಲೆ ನಿರ್ಮಿಸಿದ್ದಾರೆ.‌ ಇನ್ನು ಆಲ್​ರೌಂಡರ್ ಬೆನ್​ ಸ್ಟೋಕ್ಸ್ ಅವರನ್ನು ಸಿಎಸ್​ಕೆ ತಂಡ ಬರೋಬ್ಬರಿ 16.25 ಕೋಟಿ ರೂ. ನೀಡಿ ಖರೀದಿಸಿದೆ. ಆದ್ರೆ ಮತ್ತೊಬ್ಬ ಆಲ್‌ರೌಂಡರ್‌ ಕೆಮರೂನ್‌ ಗ್ರೀನ್‌ 17.5 ಕೋಟಿಗೆ ಮುಂಬೈ ಖರೀದಿಸಿದೆ. ಇನ್ನು ಕನ್ನಡಿಗರಾದ ಮಯಾಂಕ್‌ ಅಗರ್‌ವಾಲ್‌ 8.25 ಕೋಟಿಗೆ ಹೈದರಾಬಾದ್‌ ಪಾಲಾಗಿದ್ದಾರೆ. ಆರಂಭದಲ್ಲಿ RCB ಇವ್ರನ್ನ ಖರೀದಿಸೋಕೆ ನೋಡಿತಾದ್ರು 2 ಕೋಟಿ ದಾಟಿದ ತಕ್ಷಣ ಕೈ ಎತ್ತಿತು. ಇನ್ನು ಮನೀಷ್‌ ಪಾಂಡೆ 2.4 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೋಗಿದ್ದಾರೆ. ಹಾಗೆ 50 ಲಕ್ಷ ಮೂಲ ಬೆಲೆಗೆ ಅಜಿಂಕ್ಯಾ ರಹಾನೆ ಸಿಎಸ್‌ಕೆ ತಂಡವನ್ನ ಸೇರಿದ್ದಾರೆ. ಅತ್ತ ಪದೇ ಪದೇ ಫೇಲ್‌ ಆಗ್ತಿದ್ರು ನಿಕೋಲಾಸ್‌ ಪೂರನ್‌ ಕೂಡ 16 ಕೋಟಿ ಲಕ್ನೋ ತಂಡ ಖರೀದಿಸಿದೆ. ಇನ್ನು ನಮ್ಮ RCB 3.2 ಕೋಟಿಗೆ ಇಂಗ್ಲೆಂಡ್‌ ಆಲ್‌ರೌಂಡರ್‌ ವಿಲ್‌ ಜ್ಯಾಕ್ಸ್‌ರನ್ನ, 1.9 ಕೋಟಿಗೆ ಇಂಗ್ಲೆಂಡ್‌ ವೇಗಿ ರೀಸ್‌ ಟೋಪ್ಲೆ, ಹಾಗೆ 20 ಲಕ್ಷಕ್ಕೆ ಹಿಮಾನ್ಷು ಶರ್ಮ ಅನ್ನೋ ಬ್ಯಾಟರ್‌ನ್ನ ಖರೀದಿಸಿದೆ. ಇದು ಫುಲ್‌ನ್ಯೂಸ್‌ ರೆಕಾರ್ಡ್‌ ಆಗೋವರೆಗಿನ ವಿವರ ಆಗಿದ್ದು ಹರಾಜು ಇನ್ನು ನಡೀತಾ ಇದೆ. ನಾಳೆ ಕೂಡ ಕಂಟಿನ್ಯೂ ಆಗಲಿದೆ.

-masthmagaa.com

Contact Us for Advertisement

Leave a Reply